Kannada NewsLatest

ಪ್ರಶ್ನೆಪತ್ರಿಕೆ ಸೋರಿಕೆ; ಸೂಕ್ತ ತನಿಖೆಗೆ ಎಬಿವಿಪಿ ಒತ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿ.ವಿ.ಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಖಂಡನಾರ್ಹ.ಈ ಕೂಡಲೇ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

  ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಜ್ಯದಲ್ಲಿ ಉತ್ತಮ ಹೆಸರನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣ, ಉತ್ತಮ ಆಡಳಿತಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾಗಿರುವ ವಿಶ್ವವಿದ್ಯಾಲಯವಾಗಿದೆ. ಆದರೆ ಇತ್ತೀಚಿನ ದಿನಗಳ ಘಟನೆಗಳು ವಿ.ವಿ. ಪ್ರತಿಷ್ಠೆಗೆ ಕಪ್ಪು ಚುಕ್ಕೆ ತರುವಂತಾಗಿರುವುದು ವಿಷಾದನೀಯ ಸಂಗತಿ ಎಂದು ಪ್ರತಿಭಟನಾಕಾರರು ಹೇಳಿದರು.

    ಪರೀಕ್ಷೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವ ಘಟ್ಟಗಳಾಗಿರುತ್ತವೆ , ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸುವ ಮೂಲಕ ತಮ್ಮ ಆಡಳಿತ ವ್ಯವಸ್ಥೆಯ ಗುಣಮಟ್ಟವನ್ನು ತೋರ್ಪಡಿಸ ಬಹುದಾಗಿರುತ್ತದೆ , ಆದರೆ ಒಂದು ಪರೀಕ್ಷೆಯನ್ನು ಶಿಸ್ತು ಕ್ರಮದೊಂದಿಗೆ ನಡೆಸಲು ಸಾಧ್ಯವಾಗದೆ ಇರುವುದು ವಿ.ವಿಯ ಹದಗೆಟ್ಟ ಆಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ.

ಬಿಕಾಂ 5 ನೇ ಸೆಮಿಸ್ಟರ್ ನ ಇಂಡಿಯನ್ ಅಕೌಂಟಿಂಗ್ ಸ್ಟ್ಯಾಂಡರ್ಡ್ ಎಂಬ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು ಶೇಕಡಾ 50 ರಷ್ಟು ಪ್ರಶ್ನೆಗಳು ಪರೀಕ್ಷೆಗೂ ಮುಂಚಿತವಾಗಿ ಸಾಮಾಜಿಕ  ಜಾಲಾತಾಣದಲ್ಲಿ ಲಿಖಿತ ರೂಪದ ಪ್ರಶ್ನೆಗಳ ಒಂದು ಪೋಟೊ ಹರಿದಾಡಿದೆ. ಇದಲ್ಲದೆ ಬಿಕಾಂ ನ ಎಲ್ಲಾ ಸೆಮಿಸ್ಟರ್ ನ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಕಂಡು ಬಂದಿದೆ. ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಒಂದು ವ್ಯವಸ್ಥಿತ ಜಾಲವಿರುವುದು ಎದ್ದು ತೋರುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

Home add -Advt

ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ಇದಕ್ಕೆ ನೇರ ಹೊಣೆ ವಿ.ವಿ ಯ ಉಪ ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರಾಗಿದ್ದು, ಈ ವಿಷಯವನ್ನು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ ಕೂಡಲೇ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.

https://pragati.taskdun.com/lakshmana-savadi-left-for-bangalore-in-a-special-flight/
https://pragati.taskdun.com/it-will-rain-for-five-days-from-today-in-different-parts-of-the-state/
https://pragati.taskdun.com/no-one-can-occupy-even-an-inch-of-indias-land-amit-shah/

Related Articles

Back to top button