Kannada NewsKarnataka NewsLatest

ನೇಗಿನಹಾಳ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಶರಣು

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ –  ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ.
 ನಿನ್ನೆ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುರುಘಾ ಶ್ರೀಗಳ ಪ್ರಕರಣದ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋದಲ್ಲಿ ಇವರ ಹೆಸರನ್ನು ಬಳಸಿಕೊಂಡು ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದು ವೈರಲ್ ಅಗಿದ್ದರಿಂದ ಮನ ನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

 

ನಿನ್ನೆ ತಡ ರಾತ್ರಿವರಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಈ ಘಟನೆಯಿಂದ ಜೀವಂತ ಇರಬಾರದು ಎಂದೆನಿಸಿದೆ ಎಂದು ಹೇಳಿದ್ದರಂತೆ.
 ಮಠದ ಆವರಣದಲ್ಲಿ ಭಕ್ತರು ಜಮಾವಣೆಗೊಂಡಿದ್ದಾರೆ.
 ಡಿವೈಎಸ್ ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

https://pragati.taskdun.com/crime-news/dysp-laxmi-suicide/

https://pragati.taskdun.com/latest/murughashree-casewarden-rashmipolice-custodyenquiry/

https://pragati.taskdun.com/crime-news/miscreantsattackbjp-leaderbhajarangada-workershivamogga/

Home add -Advt

 

Related Articles

Back to top button