ಪ್ರಗತಿವಾಹಿನಿ ಸುದ್ದಿ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ತ್ರಿಶಲಾಮಾತಾ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಸೆ.8ರಿಂದ ದಶಲಕ್ಷಣ ಮಹಾಪರ್ವ ಆರಂಭಗೊಳ್ಳಲಿದೆ. ಅಮ್ಮಿನಬಾವಿಯ ಶ್ರೀನೇಮಿನಾಥ ದಿಗಂಬರ ಜೈನಮಂದಿರದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಗೆ ಉಪನ್ಯಾಸಗಳು ನಡೆಯಲಿವೆ.
ಸೆ.8 ರಂದು ‘ಉತ್ತಮ ಕ್ಷಮಾ ಧರ್ಮ’ ಕುರಿತು ಲೇಖಕ ಗುರುಮೂರ್ತಿ ಯರಂಬಳಿಮಠ, ಸೆ.9 ರಂದು ‘ಉತ್ತಮ ಮಾರ್ಧವ ಧರ್ಮ’ ಕುರಿತು ಭಾಗ್ಯಶ್ರೀ ಅರುಣ ನವಲೂರ, ಸೆ.10 ರಂದು ‘ಉತ್ತಮ ಆರ್ಜವ ಧರ್ಮ’ ಕುರಿತು ಸಂತೋಷ ಸಣ್ಣಮ್ಮನವರ, ಸೆ.11 ರಂದು ‘ಉತ್ತಮ ಶೌಚ ಧರ್ಮ’ ಕುರಿತು ತನುಜಾ ರೋಖಡೆ, ಸೆ.12 ರಂದು ‘ಉತ್ತಮ ಸತ್ಯಧರ್ಮ’ ಕುರಿತು ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ಹಟ್ಟಿಯವರ ಉಪನ್ಯಾಸ ನೀಡುವರು.
ಸೆ.13 ರಂದು ‘ಉತ್ತಮ ಸಂಯಮ ಧರ್ಮ’ ಕುರಿತು ಮಂಜುನಾಥ ಅಣ್ಣಿಗೇರಿ, ಸೆ.14 ರಂದು ‘ಉತ್ತಮ ತಪ ಧರ್ಮ’ ಕುರಿತು ಜೆಎಸ್‌ಎಸ್ ಪದವಿ-ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಎನ್. ಬಾವಿ, ಸೆ.15 ರಂದು ’ಉತ್ತಮ ತ್ಯಾಗ ಧರ್ಮ’ ಕುರಿತು ಮಂಜುನಾಥ ಹೆಬಸೂರ, ಸೆ.16 ‘ಉತ್ತಮ ಆಕಿಂಚನ್ಯ ಧರ್ಮ’ ಕುರಿತು ಶಿಕ್ಷಕಿ ಸುರೇಖಾ ಬಾವಿ, ಸೆ.17 ರಂದು ‘ಉತ್ತಮ ಬ್ರಹ್ಮಚರ್ಯ ಧರ್ಮ’ ಕುರಿತು ರಾಜಯೋಗಿನಿ ಬ್ರಹ್ಮಕುಮಾರಿ ಉಪನ್ಯಾಸ ನೀಡುವರು.
ಸಮಾರೋಪ : ಸೆ.18 ರಂದು ಕ್ಷಮಾವಳಿ ಜೊತೆಗೆ ಸಮಾರೋಪ ನಡೆಯಲಿದೆ. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವರೂರ ಜೈನ್‌ಮಠದ ಶ್ರೀಧರ್ಮಸೇನ ಭಟ್ಟಾರಕ ಸ್ವಾಮೀಜಿ, ಕೆಎಂಎಫ್ ನಿರ್ದೇಶಕಿ ಶಿವಲೀಲಾ ವಿನಯ ಕುಲಕರ್ಣಿ, ಮಾಜಿ ಶಾಸಕ ಅಮೃತ ದೇಸಾಯಿ, ತಹಶೀಲ್ದಾರ್ ಡಾ. ದೊಡ್ಡಪ್ಪ ಹೂಗಾರ್, ಜೈನ್ ಸಮಾಜದ ಹಿರಿಯರಾದ ಬಿ.ಬಿ. ದೇಸಾಯಿ, ಪಿ.ಎಸ್. ಪತ್ರಾವಳಿ, ಸುರೇಂದ್ರ ದೇಸಾಯಿ, ಶಶಿಕಲಾ ದೇಸಾಯಿ, ಚಂದ್ರಕಾಂತ ನವಲೂರ್, ಮಹಾವೀರ್ ದೇಸಾಯಿ, ಈಶ್ವರ ಗಡೇಕಾರ್, ಧರೆಪ್ಪ ಧಾರವಾಡ, ಅಜಿತ್ ದೇಸಾಯಿ, ಬ್ರಹ್ಮಕುಮಾರ ದೇಸಾಯಿ, ದೀಪಕ ದೇಸಾಯಿ, ನೇಮಣ್ಣ ಧಾರವಾಡ, ವಾಸು ದೇಸಾಯಿ ಪಾಲ್ಗೊಳ್ಳುವರೆಂದು ಶ್ರೀನೇಮಿನಾಥ ದಿಗಂಬರ ಜೈನ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ