Latest

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಲು ಕೇಂದ್ರಕ್ಕೆ ಶಿಫಾರಸು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಉತ್ತಮ ಪರಿಕಲ್ಪನೆಯೊಂದಿಗೆ ಜಾರಿಗೊಳಿಸುತ್ತಿರುವ ಎನ್‌ ಇ ಪಿಯನ್ನು (ರಾಷ್ಟ್ರೀಯ ಶಿಕ್ಷಣ ನೀತಿ) ಅಳವಡಿಸಿಕೊಳ್ಳುವಲ್ಲಿ ಉಂಟಾಗುತ್ತಿರುವ ತೊಡಕು ನಿವಾರಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಶಿಫಾರಸು ಮಾಡಲಾಗುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹೇಳಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕದ ನಿವೃತ್ತ ಕುಲಪತಿಗಳ ವೇದಿಕೆ (ಎಫ್‌ವಿಸಿಕೆ) ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಲ್ಯುಮ್ನಿ ಅಸೋಸಿಯೇಷನ್‌ (ಯುಎಂಎಎ) ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಬಹುಶಿಸ್ತೀಯ ಕೋರ್ಸ್‌ಗಳ ಆಯ್ಕೆ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎನ್‌ಇಪಿಯನ್ನು ತರಾತುರಿಯಲ್ಲಿ ಮಾಡಲಾಗಿದೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಉಪನ್ಯಾಸಕರಿಲ್ಲ, ಸೌಲಭ್ಯಗಳಿಲ್ಲ, ಉತ್ತರ ಪತ್ರಿಕೆ ಬಂದಿಲ್ಲ ಎಂಬುದು ಸೇರಿದಂತೆ ಸೌಲಭ್ಯದ ಕೊರತೆಗಳಿವೆ. ಇದನ್ನು ಸರಿಪಡಿಸುವ ಕುರಿತು ಆರು ತಿಂಗಳಿನಿಂದ ಚರ್ಚೆ ನಡೆಸಲಾಗುತ್ತಿದೆ ಎಂದರುವಿಶ್ರಾಂತ ಕುಲಪತಿ ಪೊ›. ನಿರಂಜನ, ಪೊ›.ಕೆ.ಎಸ್‌. ಅಮೃತೇಶ್‌ ಇದ್ದರು. ಪೊ›.ಸಿ.ನಾಗಣ್ಣ ನಿರೂಪಿಸಿದರು. ಎಚ್‌.ಆರ್‌. ಕಲ್ಯಾಣಿ ಪ್ರಾರ್ಥಿಸಿದರು. ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯಕರ್ಶಿ ಪ್ರೊ.ಎಸ್‌. ಶ್ರೀಕಂಠಸ್ವಾಮಿ ಇದ್ದರು.

ಮಹಿಳೆಯರಿಗೆ ಸ್ವಾಸ್ತ್ಯ ಕ್ಲಿನಿಕ್ ಸ್ಥಾಪನೆ

https://pragati.taskdun.com/latest/woman-and-children-health-careswastya-clinicmysore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button