
ಪ್ರಗತಿವಾಹಿನಿ ಸುದ್ದಿ: ನೇಸರಗಿ. ನೇಸರಗಿ ಹಾಗೂ ನಾಗನೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಒಂದು ನೀರಾವರಿ ಯೋಜನೆ ಇಲ್ಲದೆ ರೈತರು ಹೀನಾಯ ಪರಿಸ್ಥಿತಿ ಅನುಭವಿಸುತ್ತಿದ್ದರು. ಕಳೆದ 15 ವರ್ಷಗಳ ಹೋರಾಟದ ಫಲ ಹಾಗೂ ಈ ಭಾಗದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಛಲ ಬಿಡದ ಹೋರಾಟದ ಪಲವಾಗಿ ಇಂದು ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆ ಸುಮಾರು 520 ಕೋಟಿ ಅನುಧಾನದ ನೀರಾವರಿ ಯೋಜನೆಗೆ ಇಂದು 200 ಕೋಟಿ ರೂಪಾಯಿ ಅನುಧಾನ ಸಿಕ್ಕಿದ್ದು ನೀರಾವರಿ ಯೋಜನೆ ಕಾರ್ಯ 3 ವರ್ಷಗಳಲ್ಲಿ ರೈತರಿಗೆ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಸೋಮವಾರದಂದು ಗ್ರಾಮದ ಎ ಪಿ ಎಮ್ ಸಿ ಆವರಣದಲ್ಲಿ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಹಿಂದಿನ ಸರ್ಕಾರದಲ್ಲಿ ಗೊತ್ತು ಗುರಿಯಿಲ್ಲದೇ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅದಕ್ಕೆ ಬಜೆಟ್ ಅನುಮೋಧನೆ ಸಹಿತ ಇರಲಿಲ್ಲ. ಹೀಗಾಗಿ ಅವು ಕಾರ್ಯರೂಪಕ್ಕೆ ಬರಲಿಲ್ಲ. ನೀರಾವರಿ ಯೋಜನೆ ಅನುಷ್ಠಾನಕ್ಕೆ ಶಾಸಕ ಬಾಬಾಸಾಹೇಬ ಪಾಟೀಲರು ಶ್ರಮಿಸಿದ್ದು ಅವರ ಶ್ರಮದ ಪಲವಾಗಿ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯ ಗೋಕಾಕ ತಾಲೂಕಿನ ಕಣಗಾವಿ ಹತ್ತಿರ 2 ಎಕರೆ ಜಾಗೆಯಲ್ಲಿ ಜಿಲ್ಲಾ ಮಟ್ಟದ 2 ನೇ ಜಿಲ್ಲಾಸ್ಪತ್ರೆ ಪ್ರಾರಂಭ ಆಗಲಿದ್ದು ಅದರ ಸದುಪಯೋಗ ತಮಗೂ ಸಿಗಲಿದೆ ಎಂದರು. ಎಲ್ಲ ಕ್ಷೇತ್ರದಲ್ಲಿ ಸಿದ್ರಾಮಯ್ಯ ಸರ್ಕಾರ ಕಾರ್ಯ ಮಾಡುತ್ತಿದ್ದು ಹಿಂದೆ ಡಿ ಬಿ ಇನಾಮದಾರ ಅವರ ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆ ಇಂದು ಈಡೇರಿದೆ ಎಂದರು. ನೂತನ ಜಿಲ್ಲಾಧಿಕಾರಿ ಕಚೇರಿ,ಬೆಳಗಾವಿ ಚನ್ನಮ್ಮನ ಸೆರ್ಕಲದಿಂದ ಸಂಕಮ ಹೋಟೆಲವರೆಗೆ 200 ಕೋಟಿ ವೆಚ್ಚದಲ್ಲಿ ಡಬ್ಬಲ್ ಡೆಕ್ಕರ ರಸ್ತೆ, ಗೋಕಾಕ ಪಾಲ್ಸ್ ಪ್ರವಾಸಿ ಕ್ಷೇತ್ರದ ಮಾಡಲು ಕೇಬಲ್ ಕಾರ್ ಮೂಲಕ ವೀಕ್ಷಣೆಗೆ ವ್ಯವಸ್ಥೆ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ 200 ಕೋಟಿ ರೂಪಾಯಿಗಳ ಅನುಧಾನ,ಕ್ಯಾನ್ಸರ ಆಸ್ಪತ್ರೆ, ನೇಗಿನಹಾಳ ರಸ್ತೆ, ಗಟಾರ್, ಲೈಟ್ ಬಳಕೆಗೆ ಕ್ರಮ, ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ ಗಳ ಪ್ರತಿ ವರ್ಷ ಅನುಧಾನ, ಟೀಮ್ ಪಾರ್ಕ್ ನಿರ್ಮಾಣಕ್ಕೆ 55 ಕೋಟಿ ರೂ. ನೇಸರಗಿ ಬೈಲವಾಡ ಜತ್ತ ಜಂಬೋಟಿ ಡಬ್ಬಲ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿ, ಈ ಭಾಗದ ಜನರಿಗೆ ನೀರಾವರಿ ಸೌಲಭ್ಯ ಸಿಕ್ಕು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುತ್ತದೆ ಇದ್ದರಿಂದ ಈ ಭಾಗದ ರೈತರು ಆರ್ಥಿಕವಾಗಿ ಸದ್ರಡರಾಗುತ್ತಾರೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಈ ಒಂದು ಶ್ರೀ ಚನ್ನವೃಷಬೇಂದ್ರ ಏತ್ ನೀರಾವರಿ ಯೋಜನೆ ಪ್ರಾರಂಭವಾಗಲು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಾಯ ಸಹಕಾರ ಬಹಳ ಇದ್ದು, ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣಿಭೂತರಾಗಿದ್ದಾರೆ. ಈ ಭಾಗ ಮಳೆ ನೀರಾವರಿ ಆಶ್ರಯಿತ ಕ್ಷೇತ್ರವಾದ ಈ ಭಾಗಕ್ಕೆ ನೀರಾವರಿ ಯೋಜನೆಯಿಂದ ರೈತರ ಬೆಳವಣಿಗೆಗೆ ಅಡಿಪಾಯ ಆಗುತ್ತದೆ. ಮತ್ತು ಈ ಒಂದು ಯೋಜನೆಗೆ ಸಿ ಎಮ್ ಸಿದ್ರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಸಹಕಾರವು ಇದೆ ಎಂದರು. ಒಟ್ಟು 520 ಕೋಟಿ ರೂಪಾಯಿಗಳ ನೀರಾವರಿ ಯೋಜನೆ ಕಾಮಗಾರಿಯ ಅನುಧಾನದಲ್ಲಿ 200 ಕೋಟಿ ರೂ. ಮಂಜೂರಾಗಿದ್ದು, 31 ಹಳ್ಳಿಗಳಿಗೆ ನಾಳೆಯಿಂದಲೇ 11600 ಹೆಕ್ಟರ್ ಭೂಮಿಗಳಿಗೆ ನೀರು ಒದಗಿಸುವ ಯೋಜನೆ ಪ್ರಾರಂಭವಾಗಲಿದೆ ಎಂದರು. ಮೊದಲ ಹಂತದ 18 ಕಿಲೋ ಮೀಟರ್ ಉದ್ದದ ಪೈಪ್ ಲೈನ್ ಕೆಲಸ ಆರಂಭ ಆಗಲಿದೆ ಎಂದರು. ಈ ಕಾರ್ಯವನ್ನು ಜೆ ಎನ್ ಇನಪಾಸ್ಟ್ರಕ್ಚರಲ ಕಂಪನಿ ಕೆಲಸ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ನೇಸರಗಿ ಮಲ್ಲಾಪುರ ಗಾಳೆಶ್ವರ ಮಠದ ಚಿದಾನಂದ ಶ್ರೀಗಳು, ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಎಸ್ ಬಿ ರುದ್ರಾಮ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ, ಯುವ ಮುಖಂಡ ನಾನಾಸಾಹೇಬ ಪಾಟೀಲ, ಸಚಿನ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಶಿವನಗೌಡ ಪಾಟೀಲ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾವಸಾಹೇಬ ಪಾಟೀಲ, ರವಿ ಸಿದ್ದಮ್ಮನವರ, ಅಬ್ಬಾಸ ಪಿರಜಾದೆ, ಅಶೋಕ ಯರಗೋಪ್ಪ , ಉಮೇಶ ಪಾಟೀಲ, ಸತೀಶ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಮಲಗೌಡ ಪಾಟೀಲ, ಶಂಕರ ಹೊಳಿ, ರಮೇಶ ಮೇಲಿನಮನಿ, ಮಂಜುನಾಥ್ ಹುಲಮನಿ, ಮಲ್ಲಿಕಾರ್ಜುನ ಕಲ್ಲೋಳಿ,ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ,ಪ್ರಕಾಶ ಮುಂಗರವಾಡಿ, ಶಿವಾನಂದ ಕುಂಕುರ,ಆದರ್ಶ ರಾಚನಾಯ್ಕ, ಬಸವರಾಜ್ ಚಿಕ್ಕನಗೌಡರ, ಸುರೇಶ ಅಗಸಿಮನಿ, ಸುರೇಶ ಕಂಡ್ರಿ, ಕಾರ್ಯಕ್ರಮದ ನಿರೂಪಣೆಯನ್ನು ಪ್ರಾಂಶುಪಾಲರಾದ ಡಾ. ಎಫ್ ಡಿ ಗದ್ದಿಗೌಡರ ನೆರವೇರಿಸಿದರು. ನೇಸರಗಿ ಹಾಗೂ ನಾಗನೂರ ಜಿಲ್ಲಾ ಪಂಚಾಯತ ಮತಕ್ಷೇತ್ರದ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.