Latest

SSLC: ಬೆಳಗಾವಿಯ 10 ವಿದ್ಯಾರ್ಥಿಗಳು ಸೇರಿದಂತೆ 145 ವಿದ್ಯಾರ್ಥಿಗಳಿಗೆ 625ಕ್ಕೆ 625

ಬೆಳಗಾವಿ ಜಿಲ್ಲೆಯ 10 ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ ಸಿ ಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ.

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು:

ಬೆಳಗಾವಿ ಜಿಲ್ಲೆಯ 10 ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ ಸಿ ಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ.

Home add -Advt

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 6 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಸವದತ್ತಿಯ ಸಹನಾ ಮಹಾಂತೇಶ ರಾಯರ್, ಬೆಳಗಾವಿ ನಗರದ ಕೆಎಲ್ಎಸ್ ಆಂಗ್ಲ ಮಾಧ್ಯಮ ಶಾಲೆಯ ವೆಂಕಟೇಶ ಯೋಗೇಶ ಡೊಂಗ್ರೆ, ಬೆಳಗಾವಿಯ ಅಮೋಘ ಎನ್. ಕೌಶಿಕ್,  ರಾಮದುರ್ಗದ ರೋಹಿಣಿ ಗೌಡರ್, ಆದರ್ಶ ಬಸವರಾಜ ಹಾಲಬಾವಿ ಹಾಗೂ ಖಾನಾಪುರದ ಸ್ವಾತಿ ಸುರೇಶ ತೋಲಗಿ ಸೇರಿದಂತೆ 6 ವಿದ್ಯಾರ್ಥಿಗಳು 625 ಅಂಕಗಳೊಂದಿಗೆ ರಾಜ್ಯದ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ರಾಯಭಾಗದ ಸೃಷ್ಟಿ ಮಹೇಶ ಪತ್ತಾರ, ನಿಪ್ಪಾಣಿ ತಾಲೂಕಿನ ವರ್ಷಾ ಅನೀಲ್ ಪಾಟೀಲ್, ಯಕ್ಸಂಬಾದ ಶಂಭು ಶಿವಾನಂದ ಕನ್ನೈ, ಹಾಗೂ ಅಥಣಿಯ ವಿವೇಕಾನಂದ ಮಹಾಂತೇಶ ಹೊನ್ನಾಳ್ಳಿ   ಟಾಪರ್ ಆಗಿದ್ದಾರೆ.

 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಳೆದ 10 ವರ್ಷಗಳಲ್ಲೇ ಈ ಬಾರಿ ದಾಖಲೆ ಫಲಿತಾಂಶ ಬಂದಿದೆ ಎಂದರು.

ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅಮಿತ್ ಮಾದವ್, ತುಮಕೂರು ಜಿಲ್ಲೆಯ ಬಿ.ಆರ್.ಅನಘಾ, ಹಾವೇರಿ ಜಿಲ್ಲೆಯ ಪ್ರವೀಣ್ ನೀರಲಗಿ, ಬೆಳಗಾವಿಯ ಸಹನಾ ರಾಯರ್, ಹಾಸನ ಜಿಲ್ಲೆಯ ಅರ್ಜುನ್ ನಾಯ್ಕ್, ಬಳ್ಳಾರಿಯ ಕೂಡ್ಲಗಿಯ ಕವನಾ, ವಿಜಯಪುರ ಜಿಲ್ಲೆಯ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಘಾ ಎಂ.ಮೂರ್ತಿ, ಚಿಕ್ಕಮಗಳೂರಿನ ಎಸ್.ಎಸ್.ಆಕೃತಿ, ಶಿರಸಿ ಸರ್ಕಾರಿ ಮಾರಿಕಾಂಬಾ ಶಾಲೆಯ ಚಿರಾಗ್ ಮಹೇಶ್ ನಾಯ್ಕ್, ಮೈಸೂರಿನ ಎಂ.ಜಿ.ಏಕತಾ, ಕುಂದಾಪುರದ ಕಲವರ ಸರ್ಕಾರಿ ಪ್ರೌಢ ಶಾಲೆಯ ನಿಶಾ ಸೇರಿದಂತೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

ಫಲಿತಾಂಶಕ್ಕಾಗಿ http://karresults.nic.in ಅಥವಾ http://kseeb.kar.nic.in ಗೆ ಭೇಟಿ ನೀಡಿ

SSLC ಫಲಿತಾಂಶ ಪ್ರಕಟ; ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

Related Articles

Back to top button