ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಬೆಳಗಾವಿ ಮೂಲದ ಮಹಿಳೆಯ ನವಜಾತ ಶಿಶು ಸಾವನ್ನಪ್ಪಿದೆ ಎಂದು ಸುಳ್ಳು ಹೇಳಿ ಮಗುವನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಪನಹಳ್ಳಿ ತಾಲೂಕಿನ ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ ಸೇರಿದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಹರಪನಹಳ್ಳಿ ಠಾಣೆಯಲ್ಲಿ ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ ಮೂಲದ ವಸಂತಾ ಎಂಬ ಗರ್ಭಿಣಿ ಬೆಂಗಳೂರಿನ ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಹಿಳೆಗೆ ಆಶ್ರಯ ನೀಡುವ ಭರವಸೆ ನೀಡಿ ಹಾಲಸ್ವಾಮಿ ತಮ್ಮ ಮಠಕ್ಕೆ ಕರೆದೊಯ್ದಿದ್ದಾರೆ. ಮಠದಲ್ಲಿ ಆಶ್ರಯ ಪಡೆದಿದ್ದ ಮಹಿಳೆ ಹೆರಿಗೆಗಾಗಿ ಹರಪನಹಳ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಡಿಸೆಂಬರ್ 31ರಂದು ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ಜನವರಿ ಮೂರರಂದು ಮಗು ಸಾವನ್ನಪ್ಪಿದೆ ಎಂದು ಹೇಳಿ ವಸಂತಾ ಅವರನ್ನು ವಾಪಸ್ ಬೆಂಗಳೂರಿಗೆ ಕಳುಹಿಸಿದ್ದರು. ಆದರೆ ಮಗು ಬದುಕಿತ್ತಲ್ಲದೇ ಆ ಮಗುವನ್ನು ಮಕ್ಕಳಿಲ್ಲದ ಗುರುರಾಜ ಹಾಗೂ ಪ್ರಿಯಾಂಕಾ ಎಂಬ ದಂಪತಿಗೆ ಕೊಟ್ಟಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಮಗುವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಹೆರಿಗೆ ಮಾಡಿಸಿದ್ದ ವರದಿ ಬಗ್ಗೆ ಕೇಳಿದ್ದರು. ಆಗ ದಂಪತಿ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಜಿಲ್ಲಾಸ್ಪತ್ರೆ ವೈದ್ಯರು ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ನಟ ಸೋನು ಸೂದ್ ವಿರುದ್ಧ FIR ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ