“ಎಸ್.ಬಿ.ಐ. ಲೈಫ್ ಇನ್ಸೂರೆನ್ಸ್ ನಿಂದ ಸ್ಮಾರ್ಟ್ ಪ್ಲಾಟೀನಾ ಅಸ್ಶೂರ್, ನೂತನ ಜೀವವಿಮಾ ಸೇವೆ”
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರದಲ್ಲಿ ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಬೆಳಗಾವಿ-2 ಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಶಿಭಿರದಲ್ಲಿ ಎಸ್.ಬಿ.ಐ ಲೈಫ್ – ಸ್ಮಾರ್ಟ್ ಪ್ಲಾಟೀನಾ ಅಸ್ಶೂರ್ (SBI Life – Smart Platina Assure) ಎಂಬ ಜೀವವಿಮಾ ಸೇವೆಯನ್ನು ಬಿಡುಗಡೆಗೊಳಿಸಿತು.
ಶಾಖೆಯ ಡಿವಿಜಿನಲ್ ಮ್ಯಾನೇಜರ್ ಅಜಯ್ ಪರಮಶೆಟ್ಟಿ ಮಾತನಾಡಿ, ಎಸ್.ಬಿ.ಐ ಲೈಫ್ – ಸ್ಮಾರ್ಟ್ ಪ್ಲಾಟೀನಾ ಅಸ್ಶೂರ್ ವಿಮೆಯ ಸವಿಸ್ತಾರವಾದ ಸೌಲಭ್ಯಗಳನ್ನು ವಿವರಿಸುತ್ತಾ ಗ್ರಾಹಕರ ಪ್ರೀಮಿಯಮ್ ಹಣಕ್ಕೆ ಗ್ಯಾರಂಟಿಯಾಗಿ 7% ವಾರ್ಷಿಕ ಗಳಿಕೆಯನ್ನು ನೀಡಿ ಜೊತೆಗೆ 10 ಪಟ್ಟು ಜೀವವಿಮೆ ಸೌಲಭ್ಯ, ಇನ್ಕಮ್ ಟ್ಯಾಕ್ಸ್ ಸೌಲಭ್ಯ ಕೂಡ ದೊರೆಯಲಿದೆ ಎಂದರು.
ವಿಮೆದಾರರು ಬಯಸಿದ್ದಲ್ಲಿ ಈ ನೂತನ ಜೀವವಿಮಾ ಸೇವೆಯು ಇನ್ನೂ ಹಲವು ಅನುಕೂಲಗಳನ್ನು ಒಳಗೊಂಡಿದೆ ಅವುಗಳಲ್ಲಿ ಮುಖ್ಯವಾಗಿ ಪಿಂಚನಿ (ಪೆನ್ಶನ್) ಸೌಲಭ್ಯ ಕೂಡಾ ಒಂದಾಗಿದೆ ಎಂಬುದನ್ನೂ ಎಲ್ಲಾ ಸಲಹೆಗಾರರಿಗೆ ಮನವರಿಕೆ ಮಾಡಿದರು.
ಇನ್ನುಳಿದಂತೆ ಅಧಿಕಾರಿಗಳಾದ ವಿಶಾಲ ಬಾಗಿ ನೂತನ ಜೀವವಿಮೆ ಕುರಿತು ಮತ್ತಷ್ಟು ವಿವರಣೆ ನೀಡಿದರು. ಶಿಭಿರದಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿ ಹಾಗೂ ವಿಮಾ ಸಲಹೆಗಾರರು ಎಸ್.ಬಿ.ಐ. ಲೈಫ್ ವಿಮಾದರರಿಗೆ ಅನುಕೂಲಕರ ರೀತಿಯಲ್ಲಿ ವಿಮಾ ಸೇವೆಗಳನ್ನು ಆರಂಭಿಸುತ್ತಿದೆ. ಅಷ್ಟೇ ಅಲ್ಲದೇ ತೀವ್ರಗತಿಯಲ್ಲಿ ಜನರಿಗೆ ಸೇವೆ ಒದಗಿಸುತ್ತ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ