Kannada NewsKarnataka NewsLatest

ವೈದ್ಯರ ಮೇಲಿನ ಹಲ್ಲೆ ತಡೆಯಲು ಹೊಸ ನಿಯಮ ಜಾರಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಮೂಗುದಾರ ಹಾಕಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊಸ ನೀತಿಯೊಂದನ್ನು ಜಾರಿಗೊಳಿಸಿದೆ.

ಇದೇ ಆಗಸ್ಟ್ 2 ರಿಂದ ಗೆಜೆಟ್ ನೋಟಿಫಿಕೇಶನ್ ಮೂಲಕ ಈ ನಿಯಮ ಜಾರಿಯಾಗಿವೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಗೆಜೆಟ್ ಅಧಿಸೂಚನೆ ಹೊರಡಿಸಿ, ಅಶಿಸ್ತು ಅಥವಾ ಹಿಂಸಾತ್ಮಕ ನಡವಳಿಕೆ ತೋರುವ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವ ಅಧಿಕಾರವನ್ನು ವೈದ್ಯರಿಗೆ ನೀಡಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ‘ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷ್ನರ್ ನಿಯಮಗಳು 2023’ ರಲ್ಲಿ ವಿವರಿಸಿರುವ ಈ ಕ್ರಮವು ರೋಗಿಗಳು ಅಥವಾ ಅವರ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆಸುವುದಕ್ಕೆ ಕಡಿವಾಣ ಹಾಕುತ್ತಿದೆ.

ಈ ನಿಯಮಗಳ ಅಡಿ ಚಿಕಿತ್ಸೆಯನ್ನು ನಿರಾಕರಿಸುವು ವೈದ್ಯರ ನಿರ್ಧಾರದೊಂದಿಗೆ ರೋಗಿಗಳಿಂದ ಹಿಂಸೆ ಅಥವಾ ಅಶಿಸ್ತಿನ ನಡವಳಿಕೆಯ ಯಾವುದೇ ನಿದರ್ಶನಗಳನ್ನು ದಾಖಲಿಸಲು ವೈದ್ಯರಿಗೆ ಸೂಚಿಸಲಾಗಿದೆ. ನಂತರ ಪರ್ಯಾಯ ಆರೋಗ್ಯ ಸೌಲಭ್ಯಗಳಿಗೆ ರೋಗಿಯನ್ನು ಶಿಫಾರಸು ಮಾಡಲಾಗುತ್ತದೆ. ಈ ಬೆಳವಣಿಗೆಯಿಂದ 2002 ರಿಂದ ಪಾಲಿಸುತ್ತಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ವೈದ್ಯಕೀಯ ನೀತಿ ಸಂಹಿತೆಗೆ ಬದಲಾವಣೆ ತಂದಂತಾಗಿದೆ.

ಈ ನಿಯಮದನ್ವಯ ಶುಲ್ಕವನ್ನು ಪಾವತಿಸದಿದ್ದರೆ ಚಿಕಿತ್ಸೆಯನ್ನು ತಡೆಹಿಡಿಯುವ ಅಧಿಕಾರವನ್ನು ಸಹ ವೈದ್ಯರಿಗೆ ನೀಡಲಾಗಿದೆ. ಆದರೆ ಈ ನಿಯಮ ಸರ್ಕಾರಿ ವೈದ್ಯರು ಅಥವಾ ತುರ್ತು ಪರಿಸ್ಥಿತಿಗಳಿಗೆ ಅನ್ವಯಿಸುವುದಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button