ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ನಿಯಂತ್ರಣಕ್ಕೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೊಸ ಪ್ರಯೋಗ ಮಾಡಲು ಮುಂದಾಗಿದ್ದಾರೆ.
ಕೊರೋನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ವಾತಾವರಣ ಶುದ್ಧೀಕರಣ ಮಾಡುವುದು ಅಗತ್ಯವಾಗಿದೆ ಎಂದಿರುವ ಅವರು ದಕ್ಷಿಣ ಮತಕ್ಷೇತ್ರದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕ್ಷೇತ್ರದ ಗಲ್ಲಿ/ ಓಣಿಗಳಲ್ಲಿ ಎಲ್ಲ ಯುವಕ ಮಂಡಳಗಳ ಹಾಗೂ ಸ್ಥಳೀಯ ಪ್ರಮುಖರು ಜೊತೆಗೆ ತಮ್ಮ ತಮ್ಮ ಪ್ರದೇಶದಲ್ಲಿ ಹೋಮ ಮತ್ತು ಹವನ ಮಾಡುವ ಮುಖಾಂತರ ವಾತಾವರಣ ಶುದ್ದೀಕರಣ ಮಾಡವ ಕಾರ್ಯಕ್ಕೆ ಚಾಲನೆ ನೀಡೋಣ ಎಂದು ಅಭಯ ಪಾಟೀಲ ಕರೆ ನೀಡಿದ್ದಾರೆ.
ಅದರ ಅಂಗವಾಗಿ ಇಂದಿನಿಂದ ದಕ್ಷಿಣ ಮತಕ್ಷೇತ್ರದ ಹೊಸೂರ ಬಸವನಗಲ್ಲಿ ಹಾಗೂ ಪರಿಸರದಲ್ಲಿ ಸಂಜೆ 6 ಗಂಟೆಗೆ ಸುಮಾರು 50 ಕಡೆಗಳಲ್ಲಿ ಈ ಕಾರ್ಯ ಪ್ರಾರಂಭವಾಗುತ್ತಿದೆ.
ಈ ಅಗ್ನಿಕುಂಡದಲ್ಲಿ ಕುಳ್ಳು, ಕರ್ಪೂರ, ಗುಗ್ಳಾ, ಬೇವಿನ ಎಲೆ, ಅಕ್ಕಿ, ಕವಡಿ ಉದಬತ್ತಿ ಹಾಗೂ ಲವಂಗಳಂತ ವಸ್ತುಗಳನ್ನು ಬಳಸಿ, ಹವನದ ಹೊಸ ಪ್ರಯೋಗ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ