Belagavi NewsBelgaum NewsKannada NewsKarnataka News

ಬೆಳಗಾವಿಯಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಮಾದಕ ವಸ್ತು ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಾವಿ ನಗರ ಅನಗೋಳ ನಾಥಪೈ ಕೆರೆಯ ಹತ್ತಿರ ಇರುವ ಬಾಂದುರಗಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬನು MDMA (Crystal) (Methamphetamine) ಕ್ರಿಸ್ಟಲ್ ಮೆಥಾಂಫೆಟಮೈನ್ ಎನ್ನುವ ಮಾದಕ ವಸ್ತು ಮಾರಾಟ ಮಾಡುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಖಚಿತ ಮಾಹಿತಿಯನ್ನಾಧರಿಸಿ ಉಪ ಪೊಲೀಸ್ ಆಯುಕ್ತರಾದ ರೋಹನ ಜಗದೀಶ ಮತ್ತು ಪಿ. ವಿ ಸ್ನೇಹಾ ಮಾರ್ಗದರ್ಶನದಲ್ಲಿ ಶೇಖರಪ್ಪ ಎಚ್. ಸಹಾಯಕ ಪೊಲೀಸ್ ಆಯುಕ್ತರು, ಖಡೇಬಜಾರ ಉಪವಿಭಾಗ, ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ , ಕಪೀಲ್‌ದೇವ ಎ. ಜಿ. ಪೊಲೀಸ್ ಇನ್ಸ್‌ಪೆಕ್ಟರ, ತಿಲಕವಾಡಿ ಪೊಲೀಸ್ ಠಾಣೆ ಬೆಳಗಾವಿ ನಗರ ಹಾಗೂ ಸಿಬ್ಬಂದಿಗಳಾದ ಮಹೇಶ ಪಾಟೀಲ್, ಎ ವಿ ನೀಲಪ್ಪನವರ, ನವೀನಕುಮಾರ ಜಿ. ಮಲ್ಲಿಕಾರ್ಜುನ ಪಾತ್ರೋಟ, ಸಿ ಡಿ ತೇಲಿ ಸಹಕಾರದಿಂದ ಕಾರ್ಯಾಚರಣೆ ನಡೆಯಿತು.

ರಿಜ್ವಾನ ಖಾನ್ ಫಹಿಮಖಾನ್ ಪಠಾಣ ಸಾ- ಮನೆ ನಂ1758, ಆಳವಣ ಗಲ್ಲಿ, ಬೆಳಗಾವಿ ಈತನು ಅನಗೋಳ ನಾಥಪೈ ಕೆರೆಯ ಹತ್ತಿರ ಇರುವ ಬಾಂದುರಗಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಎಲ್ಲಿಂದಲೋ ಮೆಥಾಂಫೆಟಮೈನ್ ಎನ್ನುವ ಮಾದಕ ವಸ್ತುವನ್ನು ತಂದು ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ 39.450 ໐, MDMA (Crystal) (Methamphetamine) ಕ್ರಿಸ್ಟಲ್ ಮೆಥಾಂಫೆಟಮೈನ್ ಅಂಬುವ ಮಾದಕ ವಸ್ತು ಅ.ಕಿ 3,64,500=00 ರೂ ಗಳು ಜಪ್ತ ಮಾಡಿ, ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಹಾಗೂ ಅವರ ಸಿಬ್ಬಂದಿಯವರ ತಂಡವನ್ನು ಪೊಲೀಸ್ ಆಯುಕ್ತರು, ಮಾನ್ಯ ಉಪ ಪೊಲೀಸ್ ಆಯುಕ್ತರು, (ಕಾ&ಸು) ಉಪ ಪೊಲೀಸ್ ಆಯುಕ್ತರು, (ಅ&ಸಂ) ಶ್ಲಾಘಸಿದ್ದಾರೆ.

ಇದು ಬಹಳ ಪ್ರಬಲವಾದ ನಿಷಿದ್ಧ ಮಾದಕ ವಸ್ತುವಾಗಿದೆ. ಎಸಿಪಿ ಮತ್ತು ಪಿಐ ಮತ್ತು ಸಿಬ್ಬಂದಿಯಿಂದ ಅತ್ಯುತ್ತಮ ಮತ್ತು ಆಸಕ್ತಿದಾಯಕ ಪ್ರಕರಣ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಇದರ ಮೂಲವನ್ನು ಕಂಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button