Belagavi NewsBelgaum News

*ಹೊಸ ವರ್ಷಾಚಾರಣೆಯ ವೇಳೆ ರಾಜ್ಯದ್ಯಂತ ತುರ್ತು ಸ್ಪಂದನೆಗೆ ಆರೋಗ್ಯ ಕವಚ 108 ಸರ್ವಸನ್ನದ್ದ *

ಪ್ರಗತಿವಾಹಿನಿ ಸುದ್ದಿ: ಹೊಸ ವರ್ಷಾಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಡೆಯುವ ನಿಟ್ಟಿನಲ್ಲಿ ಡಿ. 31ರಂದು ರಾತ್ರಿಯಿಡಿ 108 ತುರ್ತು ಅರೋಗ್ಯ ಕವಚ ಆಂಬುಲೆನ್ಸ್ ಕರ್ನಾಟಕ ರಾಜ್ಯದ್ಯಂತ ಸನ್ನದ್ದವಾಗಲಿದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆ ಸಂಧರ್ಭಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

 108 ಆಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ. ಹೆಚ್ಚಿನ ತುರ್ತು ಸಂಧರ್ಭಗಳು ಸಂಭವಿಸಬಹುದಾದ ಪ್ರದೇಶಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್ ಅನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ವಾರದ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಮುಂಜಾಗ್ರತವಾಗಿ ಎಲ್ಲಾ ಆಂಬುಲೆನ್ಸ್ ನಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.

 ಈಗಾಗಲೇ ಬೆಳಗಾವಿಯಲ್ಲಿ 56 ಆಂಬುಲೆನ್ಸ್ ಗಳನ್ನು ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ 108 ಪ್ರೀ ಸಂಖ್ಯೆ ಡಯಲ ಮಾಡಬಹುದು ಎಂದು ಬೆಳಗಾವಿ EMRI (Emergency Management and Research Institute) ಜಿಲ್ಲಾ ವ್ಯವಸ್ತಾಪಕ  ಹರ್ಷ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button