*ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಕೇಸ್: ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣ ಹೊರತೆಗೆದ ವೈದ್ಯರು*

ಪ್ರಗತಿವಾಹಿನಿ ಸುದ್ದಿ: ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದ್ದ ಅಪರೂಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ತಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗಿದ್ದಾರೆ.
ನವಜಾತ ಶಿಶುವಿಗೆ ಅನಸ್ತೇಶಿಯಾ ನೀಡುವುದು ಅಪಯಾಕಾರಿ ಸೇರಿದಂತೆ ಹಲವು ಸವಾಲುಗಳ ನಡುವೆ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ವೈದ್ಯರ ತಂಡ ಹೊರತೆಗೆದಿದೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೆ.29ರಂದು ಹೆರುಗೆಗೆ ದಾಖಲಾಗಿದ್ದ ಧಾರವಾಡದ ಕುಂದಗೋಳ ತಾಲೂಕಿನ ಮಹಿಳೆಯೊಬ್ಬರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ನವಜಾತ ಗಂಡು ಮಗುವನ್ನು ಪರೀಕ್ಷಿಸಿದಾಗ ಅದರ ಹೊಟ್ಟೆಯಲ್ಲಿ ಭ್ರೂಣವೊಂದು ಬೆಳೆಯುತ್ತಿರುವುದು ಗೊತ್ತಾಗಿದೆ. ಮಹಿಳೆಯ ಹೆರಿಗೆಗೂ ಮುನ್ನ ಪರೀಕ್ಷಿಸಿದಾಗ ಅಲ್ಟ್ರಾಸೌಂಡ್ ನಲ್ಲಿ ಹೊಟ್ತೆಯಲ್ಲಿದ್ದ ಮಗುವಿನ ಹೊಟ್ಟೆಯಲ್ಲಿ ಭ್ರೂಣದ ರೀತಿಯದ್ದಿರುವುದು ಕಂಡುಬಂದಿದೆ. ಡಾ. ರೂಪಾಲಿ ಇದನ್ನು ಗುರುತಿಸಿದ್ದರು. ಆದರೆ ಭ್ರೂಣ ಹೆರುಗೆಗೆ ಯಾವುದೇ ಸಮಸ್ಯೆಯಾಗದ ಕಾರಣ ಮಹಿಳೆಗೆ ಸಹಜ ಹೆರಿಗೆ ಮಾಡಿಸಲಾಗಿತ್ತು.
ನವಜಾತ ಶಿಶುವಿಗೆ ಅಲ್ಟ್ರಾಸೌಂಡ್ ಎಂಆರ್ ಐ ಮಾಡಿಸಿದಾಗಲೂ ಅದರ ಹೊಟ್ಟೆಯಲ್ಲಿ ಭ್ರೂಣವಿರುವುದು ದೃಢವಾಗಿದೆ. ಆದರೆ ಆಗತಾನೆ ಹುಟ್ಟಿದ ಮಗುವಿಗೆ ಶಸ್ತ್ರಚಿಕಿತ್ಸೆ ಕಷ್ಟಸಾಧ್ಯವಾಗಿತ್ತು. ಆದರೆ ಮಗುವಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಿಮ್ಸ್ ವೈದ್ಯರು ಇದನ್ನು ಗಂಭೀರವಾಗಿ ಪರ್ಗಣಿಸಿದ್ದಾರೆ. ಶಸ್ತ್ರಚಿಕಿತ್ಸೆ ಜವಾಬ್ದಾರಿಯನ್ನು ಹುಬ್ಬಳ್ಳಿ ಕಿಮ್ಸ್ ನ ಮಕ್ಕಳ ಶಸ್ತ್ರಚಿಕಿತ್ಸಕ ಡಾ.ರಾಜಶಂಕರ್ ಗೆ ವಹಿಸಲಾಗಿತ್ತು. ಅವರು ತಜ್ಞವೈದ್ಯರ ಜೊತೆ ಚರ್ಚಿಸಿ ಮಗುವಿಗೆ ಯಶಸ್ತಿ ಶಸ್ತ್ರಚಿಕಿತ್ಸೆ ನೆರವೇರಿಸಿ ಭ್ರೂಣ ಹೊರತೆಗೆದಿದ್ದಾರೆ. ಸುಮಾರು 45 ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮಗುವಿನ ಹೊಟ್ಟೆಯಲ್ಲಿದ್ದ 8 ಸೆಂಟಿಮೀಟರ್ ಗಾತ್ರದ ಭ್ರೂಣ ಹೊರತೆಗೆಯಲಾಗಿದೆ. ಹೊರತೆಗೆ ಭ್ರೂಣಕ್ಕೆ ಮೆದುಳು ಹೃದಯವಿರಲಿಲ್ಲ. ಬೆನ್ನುಮೂಳೆ ಹಾಗೂ ಸಣ್ಣಕೈಕಾಲು ಇರುವುದು ಪತ್ತೆಯಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು, ತೀವ್ರನಿಘಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.