Kannada NewsKarnataka NewsLatest

*ಭೀಕರ ಅಪಘಾತಕ್ಕೆ ಯುವ IPS ಅಧಿಕಾರಿ ಬಲಿ* *ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಸಾವು*

ಪ್ರಗತಿವಾಹಿನಿ ಸುದ್ದಿ, ಹಾಸನ: ಮೊದಲ ಕೆಲಸದ ಕರ್ತವ್ಯಕ್ಕೆ ಹಾಜರಾಗಲು ತೆರಳುವ ಸಂದರ್ಭದಲ್ಲೇ ಯುವ ಐಪಿಎಸ್ ಅಧಿಕಾರಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಮಧ್ಯಪ್ರದೇಶ ಮೂಲದ ಹರ್ಷವರ್ಧನ ಹಾಸನ ಜಿಲ್ಲೆ ಹೊಳೆನರಸಿಪುರ ಠಾಣೆಯ ಡಿಎಸ್ಪಿಯಾಗಿ ನೇಮಕವಾಗಿದ್ದರು. ಮೈಸೂರಿನಲ್ಲಿ ತರಭೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ತೆರಳುವಾಗ ಜೀಪ್ ಟೈಯರ್ ಬರ್ಸ್ಟ ಆಗಿ ಹರ್ಷವರ್ಧನ ಮತ್ತು ಜೀಪ್ ಚಾಲಕ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಹರ್ಷವರ್ಧನ ಕೊನೆಯುಸಿರೆಳೆದಿದ್ದಾರೆ.

2023ನೇ ಸಾಲಿನ ಐಪಿಎಸ್ ಪರೀಕ್ಷೆಯಲ್ಲಿ153ನೇ ರ್ಯಾಂಕ್ ಪಡೆದಿದ್ದ ಅವರು ಕರ್ತವ್ಯ ಆರಂಭಿಸುವ ಮುನ್ನವೇ ಇಹಲೋಕ ತ್ಯಜಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button