Latest

ಎಮ್ಮೆಗಳ ಹಿಂಡಿಗೆ ಡಿಕ್ಕಿ; ವಂದೇ ಮಾತರಂ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಜಖಂ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಇತ್ತೀಚೆಗಷ್ಟೇ ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ  ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ಚಲಿಸುತ್ತಿದ್ದಾಗ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿದೆ.

ಗುಜರಾತ್‌ನ ವತ್ವಾ ನಿಲ್ದಾಣದಿಂದ ಮಣಿನಗರದ ನಡುವೆ ಗುರುವಾರ ಹಳಿಗಳ ಮೇಲೆ ಎಮ್ಮೆಗಳ ಹಿಂಡು ಬಂದಿದ್ದು, ವೇಗವಾಗಿ ಸಾಗುತ್ತಿದ್ದ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಅಪ್ಪಳಿಸಿತು.

ಅಪಘಾತದಿಂದ ರೈಲಿನ ಎಂಜಿನ್‌ನ ಮುಂಭಾಗದ ಒಂದು ಬದಿಯೇ ಕಿತ್ತುಹೋಗಿದೆ. ಹಳಿಗಳ ಪಕ್ಕ ಬೇಲಿ ನಿರ್ಮಾಣ ಸೇರಿದಂತೆ ಹಳಿಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಈಗಾಗಲೇ ನಡೆಯುತ್ತಿದ್ದು, ಮಾರ್ಚ್ 2024ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಪಶ್ಚಿಮ ರೈಲ್ವೆ  ಹಿರಿಯ ಅಧಿಕಾರಿ ಪ್ರೊ. ಜೆ.ಕೆ. ಜಯಂತ್ ತಿಳಿಸಿದ್ದಾರೆ.

ಟ್ರ್ಯಾಕ್ ಮೇಲ್ದರ್ಜೆಗೇರಿಸುವ ಯೋಜನೆಯಡಿ, ಟ್ರ್ಯಾಕ್‌ಗೆ ಬೇಲಿ ಹಾಕುವುದು ಮಾತ್ರವಲ್ಲದೆ ಟ್ರ್ಯಾಕ್‌ನ ವೇಗದ ಮಿತಿಯನ್ನು ಸಹ ಹೆಚ್ಚಿಸಲಾಗುತ್ತದೆ. ಪ್ರಸ್ತುತ, ಮುಂಬೈ-ಅಹಮದಾಬಾದ್ ವಿಭಾಗದ ಟ್ರ್ಯಾಕ್ ಗರಿಷ್ಠ ಪ್ರತಿ ಗಂಟೆಗೆ 130 ವೇಗವನ್ನು ಹೊಂದಿದೆ. ಟ್ರ್ಯಾಕ್ ನವೀಕರಣ ಯೋಜನೆ ಪೂರ್ಣಗೊಂಡ ನಂತರ, ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವೇಗದ ಮಿತಿಯನ್ನು ಗಂಟೆಗೆ 160 ಕಿಮೀವರೆಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಎಂಜಿನ್ ರಹಿತ ರೈಲು ಸಂಪೂರ್ಣವಾಗಿ ಬೇಲಿಯಿಂದ ಸುತ್ತುವರಿದ ಟ್ರ್ಯಾಕ್‌ಗಳಿಗೆ ಮಾತ್ರ ಮೀಸಲಾಗಿದೆ. ರೈಲು ಪೂರ್ಣ ವೇಗದಲ್ಲಿ ಚಲಿಸಿದರೆ, ಅಪಘಾತಗಳ ಪರಿಣಾಮಗಳು ಗಂಭೀರವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಸೋಲಾರ್ ಹಗರಣದ ತನಿಖೆಯನ್ನೂ ಮಾಡಿ; ನಾನು ತಪ್ಪು ಮಾಡಿದರೆ ನನ್ನನ್ನು ಗಲ್ಲಿಗೇರಿಸಲಿ ಎಂದ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button