
ಪ್ರಗತಿವಾಹಿನಿ ಸುದ್ದಿ: ಅತ್ತೆ ಹಾಗೂ ಭಾವನ ಕಿರುಕುಳಕ್ಕೆ ನೊಂದು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಬೆಟಗೇರಿ ನಗರದ ಶರಣಬಸವೇಶ್ವರ ನಗರದಲ್ಲಿ ನಡೆದಿದೆ. ಪೂಜಾ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಬಳ್ಳಾರಿ ಮೂಲದ ಪೂಜಾಳನ್ನು ಬೆಟಗೇರಿಯ ಶರಣಬಸವೇಶ್ವರ ನಗರದ ಅಮರೇಶನ ಜೊತೆ ನಾಲ್ಕು ತಿಂಗಳ ಹಿಂದೆ ವಿವಹ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಅತ್ತೆ ಹಾಗೂ ಭಾವ ಪೂಜಾಳಿಗೆ ಕಿರುಕುಳ ನೀಡುತ್ತಿದ್ದಂತೆ. ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೂಜಾ ಬರೆದಿಟ್ಟಿರುವ ಡೆತ್ ನೋಟ್ ಮನೆಯ ಕಪಾಟಿನಲ್ಲಿ ಪತ್ತೆಯಾಗಿದೆ. ನನ್ನ ಸಾವಿಗೆ ಅತ್ತೆ, ಭಾವ ವೀರನಗೌಡ ಕಾರಣ ಎಂದು ಬರೆದಿಟ್ಟಿದ್ದಾಳೆ. ಪೂಜಾ ಪೋಷಕರು, ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.