![](https://pragativahini.com/wp-content/uploads/2025/02/andra-death-.jpg)
ಪ್ರಗತಿವಾಹಿನಿ ಸುದ್ದಿ: ನವವಿವಾಹಿತೆ ಪತಿಯ ಲೈಂಗಿಕ ಚಿತ್ರಹಿಂಸೆ ತಾಳಲಾರದೇ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಇಲ್ಲಿನ ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ವಸಂತ ಆತ್ಮಹತ್ಯೆ ಮಾಡಿಕೊಂಡವರು.
ಪತಿ ತನ್ನ ಲೈಂಗಿಕ ವಿಡಿಯೋಗಳನ್ನು ತೋರಿಸಿ ಚಿತ್ರಹಿಂಸೆ ನೀಡಿ ವಿಕೃತಿ ಮೆರೆಯುತ್ತಿದ್ದನಂತೆ. ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ನೋಡುವುದು, ಪತ್ನಿಗೆ ಟರಚರ್ ಕೊಡುವುದೇ ಕೆಲಸವಾಗಿದೆ ಎಂದು ವಸಂತಾ ತನ್ನ ಪೋಷಕರೊಂದಿಗೆ ಅಳಲು ತೋಡಿಕೊಂಡಿದ್ದರಂತೆ. ಪತಿಯ ವಿಕೃತ ಅಟ್ಟಹಾಸಕ್ಕೆ ನೊಂದು ವಸಂತಾ ನೇಣಿಗೆ ಶರಣಾಗಿದ್ದಾರೆ.
ನಮ್ಮ ಮಗಳಿಗೆ ಅಳಿಯ ಈ ರೀತಿ ಟಾರ್ಚರ್ ಕೊಟ್ಟು ಕೊಟ್ಟು ಕೊಲೆ ಮಾಡಿದ್ದಾನೆ ಎಂದು ವಸಂತಾ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಪತಿ ನಾಗೇಂದ್ರಬಾಬು ನನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ