
ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ಮೂರು ದಿನಗಳ ಹಿಂದಷ್ಟೇ ಅದ್ದೂರುಯಾಗಿ ವಿವಾಹವಾಗಿದ್ದ ನವವಿವಾಹಿತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಎಯಲ್ಲಿ ನಡೆದಿದೆ.
ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಅವರ ಪುತ್ರ ಶಶಾಂಕ್ (28) ಮೃತ ದುರ್ದೈವಿ. ಶಶಾಂಕ್ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದರು. ಜಾರ್ಖಂಡ್ ಮೂಲದ ಯುವತಿ ಅಷ್ಟಾರಳನ್ನು ಪ್ರೀತಿಸುತ್ತಿದ್ದರು. ಮನೆಯವರನ್ನು ಒಪ್ಪಿಸಿ ಭಾನುವಾರವಷ್ಟೇ ಮೈಸೂರಿನಲ್ಲಿ ಅದ್ದೂರಿ ವಿವಾಹವಾಗಿದ್ದರು. ಮದುವೆ ದುಇನವೂ ಶಶಾಂಕ್ ಜ್ವರದಿಂದ ಬಳಲುತ್ತಿದ್ದ. ಮದುವೆ ಬಳಿಕ ಸೋಮವಾರ ಬೆಂಗಳೂರಿನ ನಿವಾಸಕ್ಕೆ ವಾಪಸ್ ಆಗಿದ್ದರು.
ಈ ವೇಳೆ ಶಶಾಂಕ್ ಗೆ ಸ್ವಲ್ಪ ಎದೆನೋವು ಕಾಣಿಸಿಕೊಂದಿತ್ತು. ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಶಶಾಂಕ್ ಕೊನೆಯುಸಿರೆಳೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ