ಜಿಐಟಿಯಲ್ಲಿ ಪಿಜಿಸಿಇಟಿ ಕುರಿತ ಉಚಿತ ಮಾಹಿತಿ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿಐಟಿ)ದ ಎಂಬಿಎ ವಿಭಾಗವು ಜುಲೈ 1 ರಿಂದ 3 ರ ವರೆಗೆ ಪಿಜಿಸಿಇಟಿ ಕುರಿತ ಮೂರು ದಿನಗಳ ಉಚಿತ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದರಲ್ಲಿ ಮುಖ್ಯವಾಗಿ ಪಿಜಿಸಿಇಟಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವ ಕುರಿತು ಹಾಗೂ ಇದಕ್ಕೆ ಅವಶ್ಯ ಇರುವ ಎಲ್ಲ ಪಠ್ಯಕ್ರಮವನ್ನು ತಿಳಿಸಲಾಗುವುದು ಹಾಗೂ ಕಾಲೇಜುಗಳ ಆಯ್ಕೆ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಎಂಬಿಎ ಕೋರ್ಸ್ ಗೆ ಯಾವ ರೀತಿಯ ಅವಕಾಶಗಳಿವೆ ಎಂಬ ಅಂಶಗಳ ಬಗ್ಗೆ ವಿವರವಾಗಿ ಕೋರ್ಸ್ ಆಕಾಂಕ್ಷಿಗಳಿಗೆ ತಿಳಿಸಿ ಕೊಡಲಾಗುವುದು. ಇದರ ಜೊತೆಗೆ ಪಿಜಿಸಿಇಟಿ ಸೀಟು ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಡಲಾಗುವುದು.
ಎಂಬಿಎ ಕೋರ್ಸ್ ಗಳ ಆಕಾಂಕ್ಷಿಗಳು ಇದರ ಸದುಪಯೋಗವನ್ನು ತೆಗೆದುಕೊಳ್ಳಬೇಕೆಂದು ಕಾಲೇಜು ಆಡಳಿತ ಮಂಡಳಿ ವಿನಂತಿಸಿದೆ. ಇದು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ 0831-2498500 ಸಂಪರ್ಕಿಸಬಹುದು.




