Latest

ರಾಮಲಿಂಗಾ ರೆಡ್ಡಿಗೆ ಡಿ.ಕೆ.ಶಿವಕುಮಾರ ಹೊಸ ಆಫರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರಡ್ಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಒಂದು ವಾರ ಕಳೆದಿದೆ.

ಹಲವಾರು ಬಾರಿ ಭರವಸೆ ನೀಡಿ ವಂಚಿಸಲಾಗಿದೆ. ನನಗೊಂದು ನ್ಯಾಯ, ಇತರರಿಗೊಂದು ನ್ಯಾಯ ಅನುಸರಿಸಲಾಗಿದೆ. ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ ಅವರಿಗೆಲ್ಲ ಸಚಿವಸ್ಥಾನ ನೀಡಿ ನನ್ನನ್ನು ಮಾತ್ರ ಹೊರಗಿಡಲಾಗಿದೆ. ಇದರಿಂದ ಮನನೊಂದು ನಾನು ಹೊರಗೆ ಬಂದಿದ್ದೇನೆ ಎಂದು ಅವರು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ.

ಈಗ ಡಿ.ಕೆ.ಶಿವಕುಮಾರ ಅವರಿಗೊಂದು ಹೊಸ ಆಫರ್ ನೀಡಿದ್ದಾರೆ. ರಾಮಲಿಂಗಾ ರಡ್ಡಿ, ನಾನು 40 ವರ್ಷದಿಂದ ಸ್ನೇಹಿತರು. ರಾಜಕೀಯದಲ್ಲಿ ಒಟ್ಟಿಗೇ ಬೆಳೆಯುತ್ತ ಬಂದವರು. ಅವರಿಗೆ ಅನ್ಯಾಯವಾಗಿದ್ದು ನಿಜ ಎಂದಿರುವ ಅವರು, ಅವರು ರಾಜಿನಾಮೆ ಹಿಂಪಡೆದ ದಿನವೇ ಅವರಿಗೆ ಸಚಿವಸ್ಥಾನ ನೀಡುವುದಾಗಿ ಘೋಷಿಸಿದ್ದಾರೆ.

Home add -Advt

ಸರಕಾರ ಉಳಿಸಲು ನಾನು ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ. ಈಗಾಗಲೆ ನನ್ನ ಸಚಿವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ರಾಜಿನಾಮೆ ನೀಡಿದವರೆಲ್ಲ ನಮ್ಮ ಸ್ನೇಹಿತರು. ಅವರ ನೋವನ್ನು ಸರಿಪಡಿಸುವುದು , ಮಾತುಕತೆ ಮಾಡುವುದು ನಮ್ಮ ಕರ್ತವ್ಯ. ಅವರೆಲ್ಲ ವಾಪಸ್ ಬರುತ್ತಾರೆ. ಸರಕಾರ ಉಳಿಯುತ್ತದೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.

Related Articles

Back to top button