Latest

ಗಂಭೀರತೆ ಪಡೆದುಕೊಂಡ ಶ್ರೀಮಂತ ಪಾಟೀಲ ಪ್ರಕರಣ

ಗಂಭೀರತೆ ಪಡೆದುಕೊಂಡ ಶ್ರೀಮಂತ ಪಾಟೀಲ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನಾಪತ್ತೆ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

ನಿನ್ನೆ ರಾತ್ರಿಯಿಂದ ಕಾಂಗ್ರೆಸ್ ಪಾಳಯದಿಂದ ಶ್ರೀಮಂತ ಪಾಟೀಲ ಅವರು ನಾಪತ್ತೆಯಾಗಿದ್ದು, ಅವರು ಮುಂಬೈ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪೆಡಯುತ್ತಿರುವ ಫೋಟೋ ಹೊರಗೆ ಬಂದಿದೆ.

ಆದರೆ, ಶ್ರೀಮಂತ ಪಾಟೀಲ ಅವರನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ ವಿಧಾನಸಭೆಯಲ್ಲಿ ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸಹ ಇದಕ್ಕೆ ಧ್ವನಿಗೂಡಿಸಿದರು.

ಅವರ ಆರೋಗ್ಯ ನಿನ್ನೆ ಸಂಜೆಯವರೆಗೂ ಉತ್ತಮವಾಗಿತ್ತು. ಅವರನ್ನು ಅಪಹರಿಸಿ ಚನ್ನೈಗೆ ಕರೆದುಕೊಡು ಹೋಗಿ, ಅಲ್ಲಿಂದ ಮುಂಬೈಗೆ ಕರೆದೊಯ್ದು ಬಲಾತ್ಕಾರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಮತ್ತಿತರರು ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿರುವ ದಾಖಲೆ ಇದೆ ಎಂದು ಅವರು ಆರೋಪಿಸಿದರು.

ಈ ವೇಳೆ ತಮಗೆ ಶ್ರೀಮಂತ ಪಾಟೀಲ ಅವರ ಹೆಸರಿನಲ್ಲಿ ಬಂದಿರುವ ಪತ್ರವನ್ನು ಸ್ಪೀಕರ್ ರಮೇಶ ಕುಮಾರ ಓದಿದರು. ತೀವ್ರ ಅನಾರೋಗ್ಯದಿಂದ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಗ ತಾವು ದಾಖಲಾಗಿದ್ದಾಗಿಯೂ, ತಮಗೆ ಸಧನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಪತ್ರ ಬರೆದಿದ್ದಾರೆ. ಆದರೆ ಆ ಪತ್ರಕ್ಕೆ ಅವರ ಸಹಿಯೂ ಇಲ್ಲ. ಅವರ ಲೆಟರ್ ಹೆಡ್ ನಲ್ಲಿಯೂ ಇಲ್ಲ ಎಂದರು.

ಇಂತಹ ಪತ್ರ ಬಂದರೆ ನಾನೇನು ಮಾಡಬೇಕು ಎಂದ ಸ್ಪೀಕರ್, ತಕ್ಷಣ ಅವರ ಕುಟುಂಬದವರನ್ನು ಸಂಪರ್ಕಿಸಿ ವಿವರ ಸಂಗ್ರಹಿಸಿ ವರದಿ ನೀಡಿ ಎಂದು ಗೃಹ ಸಚಿವರಿಗೆ ಆದೇಶಿಸಿದರು. ಗೃಹ ಸಚಿವ ಎಂ.ಬಿ.ಪಾಟೀಲ ಮಾಹಿತಿ ಸಂಗ್ರಹಿಸಲು ಸದನದಿಂದ ತೆರಳಿದರು.

ಸದನದಲ್ಲಿ ಗದ್ದಲ ಆರಂಭವಾಗಿದ್ದರಿಂದ ಮತ್ತು ಸ್ಪೀಕರ್ ರಮೇಶ ಕುಮಾರ ವಿಪ್ ಸಂಬಂಧ ಅಡ್ವೋಕೇಟ್ ಜನರಲ್ ಜೊತೆ ಮಾತನಾಡಬೇಕಿರುವುದರಿಂದ ಸದನವನ್ನು ಅರ್ಧಗಂಟೆ ಮುಂದೂಡಿದರು.

ಇವುಗಳನ್ನೂ ಓದಿ –

ಕೈ ತಪ್ಪಿಸಿಕೊಂಡ ಶ್ರೀಮಂತ ಪಾಟೀಲ ಎಲ್ಲಿದ್ದಾರೆ ನೋಡಿ

ಶ್ರೀಮಂತ ಪಾಟೀಲ ಕಿಡ್ನ್ಯಾಪ್ ಆಗಿದ್ದಾರೆ

ರಾತ್ರೋರಾತ್ರಿ ದೋಸ್ತಿಗೆ ಮತ್ತೊಂದು ಶಾಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button