ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ರಾಷ್ಟ್ರೀಯ ಹೆದ್ದಾರಿ ೫೪೮ ಬಿ ಬೆಳಗಾವಿ ಜಿಲ್ಲೆಯ ಸಾವಳಗಿ ಕ್ರಾಸ್‌ದಿಂದ ಪ್ರಾರಂಭಗೊಂಡು ಗೋಟುರ ಹತ್ತಿರ ಪುನಾ-ಬೆಂಗಳೂರು ರಸ್ತೆಗೆ ಕೂಡುವ ಒಟ್ಟು ರಸ್ತೆ ೧೨೯ ಕಿ.ಮೀ. ಚತುಷ್ಪಥ (೪ ಲೆನ್) ರಸ್ತೆ ನಿರ್ಮಾಣದ ಪೈಕಿ ಸಾವಳಗಿ ಕ್ರಾಸ್‌ದಿಂದ ಮುರಗುಂಡಿ ವರೆಗೆ ರಸ್ತೆ ೪೦ ಕಿ.ಮೀ. ಅಂದಾಜು ವೆಚ್ಚ ರೂ. ೩೫೦ ಕೋಟಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.
ಮುರಗುಂಡಿ ಯಿಂದ ಚಿಕ್ಕೋಡಿ ವರಗೆ ೬೨ ಕಿ.ಮೀ ಎರಡು ಹಂತಗಳಲ್ಲಿ ಬೃಹತ್ ಸೇತುವೆ ಒಳಗೊಂಡು ರೂ.೭೮೫.೭೯ ಕೋಟಿ ಮತ್ತು ರೂ.೧೦೮೪.೦೦ ಕೋಟಿ ಒಟ್ಟು ೧೮೬೯.೭೯ ಕೋಟಿಗಳಿಗೆ ರಸ್ತೆ ಉದ್ದ ೬೨ ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಂಜೂರಾಗಿದ್ದು ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಸಂಸದ ಅಣ್ಣಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಇನ್ನುಳಿದ ಚಿಕ್ಕೋಡಿ ಯಿಂದ ಚಿಕ್ಕೋಡಿ ಬಾಯ್‌ಪಾಸ್ ಒಳಗೊಂಡು ಗೋಟೂರ ವರೆಗೆ ೨೭ ಕಿ.ಮಿ, ಅಂದಾಜು ೧೩೦೦ ಕೋಟಿ ರೂ. ಮೊತ್ತದ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಡಿಪಿಆರ್ ವರದಿ ತಯಾರಿಸಿ ರಸ್ತೆ ಮತ್ತು ಸಾರಿಗೆ ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಹಾಗೂ ಮುರಗುಂಡಿಯಿಂದ ಚಿಕ್ಕೋಡಿಯ ಅಂಕಲಿ ವರಗೆ ೬೨ ಕಿ.ಮೀ ಎರಡು ಹಂತಗಳಲ್ಲಿ ಬೃಹತ್ ಸೇತುವೆ ಒಳಗೊಂಡು ರೂ.೧೮೬೯.೭೯ ಕೋಟಿಗಳಿಗೆ ರಸ್ತೆ ಉದ್ದ ೬೨ ಕಿ.ಮೀ. ಮಂಜೂರು ಮಾಡಲು ಅಣ್ಣಾಸಾಹೇಬ ಜೊಲ್ಲೆ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ ಗಡಕರಿ ಅವರಿಗೆ ಕಳೆದ ತಿಂಗಳಿನಲ್ಲಿ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿ ಮನವಿ/ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಇದ್ದಕ್ಕೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಮುರಗುಂಡಿಯಿಂದ ಚಿಕ್ಕೋಡಿ ವರೆಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಅತಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮಾಡಲು ಹಾಗೂ ಇದರಿಂದ ಉತ್ತರ ಕರ್ನಾಟಕ ಹಾಗೂ ಗಡಿ ಭಾಗದಲ್ಲಿ ಸುಮಾರು ೧೬ ಸಕ್ಕರೆ ಕಾರ್ಖಾನೆಗಳಿದ್ದು ಇದರಿಂದ ರೈತರಿಗೆ, ಕಾರ್ಖಾನೆಯವರಿಗೆ ಹಾಗೂ ಸಾರ್ವಜನಿಕರಿಗೆ ಸಾರಿಗೆ ಅನುಕೂಲ ಮಾಡಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ ಗಡಕರಿ ಇವರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ