ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಸಂಭ್ರಮ ದಾಖಲಿಸಲು ಜಗತ್ಪ್ರಸಿದ್ಧ ನಯಾಗರಾ ಫಾಲ್ಸ್ ತ್ರಿವರ್ಣದಲ್ಲಿ ಧುಮ್ಮಿಕ್ಕಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸ ನಯಾಗರಾ ಜಲಪಾತ ಕೇಸರಿ- ಬಿಳಿ- ಹಸಿರು ಬಣ್ಣದ ಲೈಟ್ ಇಫೆಕ್ಟ್ ನಲ್ಲಿ ವರ್ಣಮಯವಾಗಿ ಧುಮುಕುವ ವಿಡಿಯೊ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ಇಡೀ ಜಲಪಾತ ಭಾರತದ ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ಮಿಂದೆದ್ದಂಥ ಚಿತ್ರಗಳು ವಿಶ್ವಾದ್ಯಂತ ಜಾಲತಾಣಿಗರನ್ನು ಅಕರ್ಷಿಸಿವೆ. “ಪಟಾಕಿಗಳ ಸದ್ದುಗಳ ನಡುವೆ ಉಸಿರುಕಟ್ಟುವಂತೆ ನಯಾಗರಾ ಜಲಪಾತ ಭವ್ಯವಾಗಿ ಕಾಣುತ್ತದೆ” ಎಂದು ಕಾನ್ಸುಲೇಟ್ ಟ್ವೀಟ್‌ನಲ್ಲಿ ಬರೆದಿದೆ.
ಭೇಟಿಯ ಸಂಕೇತವಾಗಿ ಕಾನ್ಸುಲೇಟ್ ಅನ್ನು ಸಹ ತ್ರಿವರ್ಣ ಧ್ವಜದಲ್ಲಿ ಬೆಳಗಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ