Kannada NewsLatest
ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 50 ಲಕ್ಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ : ಗಡಿಜಿಲ್ಲೆಯ ಏಕೈಕ ಜಗದ್ಗುರು ಪೀಠವಾಗಿರುವ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 50 ಲಕ್ಷ ಅನುದಾನ ನೀಡಲಾಗಿದ್ದು, ಶೀಘ್ರದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಂಗಳವಾರ ಮುಜರಾಯಿ ಇಲಾಖೆಯಡಿ 50 ಲಕ್ಷ ವೆಚ್ಚದಲ್ಲಿ ಸಮೀಪದ ನಿಡಸೋಸಿ ದುರದುಂಡೀಶ್ವರ ಮಠದ ನೂತನ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ನನಗೆ ಧಾರ್ಮಿಕ ಚಿಂತನೆಗಳ ಮೇಲೆ ಹೆಚ್ಚಿನ ನಂಬಿಕೆಯಿದೆ. ದೇವರ ಆಶೀರ್ವಾದದಿಂದ ದೇವಸ್ಥಾನಗಳ ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮಠಮಾನ್ಯಗಳ ಅಭಿವೃದ್ಧಿಗೂ ಒತ್ತು ನೀಡುತ್ತೇನೆ ಎಂದರು.
ತ್ರಿವಿಧ ದಾಸೋಹ ಪರಂಪರೆಯ ಮೂಲಕ ನಿಡಸೋಸಿ ಮಠ ಸಮಾಜದ ಜಾಗೃತಿ ಮೂಡಿಸುತ್ತಲಿದ್ದು, ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತೃಹೃದಯಿ ಕಾರ್ಯಗಳಿಂದ ಮಠ ಭಕ್ತರ ಪಾಲಿಗೆ ಶೃದ್ಧಾಕೇಂದ್ರವಾಗಿದ್ದು,ಜೊಲ್ಲೆ ಕುಟುಂಬದ ಬೆಳವಣಿಗೆಗೆ ಶ್ರೀಮಠದ ಹಾಗೂ ಶ್ರೀಗಳ ಆಶೀರ್ವಾದವೇ ಮೂಲ ಕಾರಣವಾಗಿದೆ. ಶ್ರೀಗಳು ಹಾಗೂ ಮಠದ ಮೇಲೆ ಭಕ್ತಿಯನ್ನಿಟ್ಟುಕೊಂಡಿರುವ ನಮ್ಮ ಕುಟುಂಬ ಮಠದ ಅಭಿವೃದ್ಧಿಗೆ ಸರಕಾರದಿಂದ ಹಾಗೂ ವಯಕ್ತಿಕವಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಹಿರಾಶುಗರ್ಸ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ನಿಡಸೋಸಿ ಶ್ರೀಮಠ ಗಡಿಭಾಗದಲ್ಲಿ ಧಾರ್ಮಿಕ ನಂಬಿಕೆ ಉಳಿಸಿ-ಬೆಳೆಸುವ ಕಾರ್ಯ ಮಾಡುತ್ತಲಿದ್ದು, ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು.
ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಠಗಳಲ್ಲಿ ಧಾರ್ಮಿಕತೆಯ ಜೊತೆಗೆ ಸಮಾಜದ ಇತರ ಕಾರ್ಯಗಳು ನೆರವೇರಿಸಲು ಅಭಿವೃದ್ಧಿ ಕಾರ್ಯಗಳ ಅವಶ್ಯಕವಿದೆ. ಈ ನಿಟ್ಟಿನಲ್ಲಿ ಜೊಲ್ಲೆ ದಂಪತಿ ೫೦ ಲಕ್ಷ ಅನುದಾನ ಒದಗಿಸಿರುವುದು ಮಠದ ಚಟುವಟಿಕೆಗಳಿಗೆ ಅನುಕೂಲ ಒದಗಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಶ್ರೀಗಳು ಸನ್ಮಾನಿಸಿದರು.
ಮಂಗಳೂರು ರಾಮಕೃಷ್ಣಾಶ್ರಮದ ಏಕಗಮ್ಯಾನಂದ ಸ್ವಾಮೀಜಿ, ದುಂಡಪ್ಪಾ ಹೆದ್ದೂರಿ, ರಾಯಪ್ಪಾ ನಿಂಗನೂರಿ, ದುಂಡಪ್ಪಾ ಗಳಗಿ, ಬಸವಣ್ಣಿ ಹೆಗ್ಗಾಯಿ, ಸಾತಪ್ಪಾ ಕಾರತಗಿ, ಮಲ್ಲಪ್ಪಾ ತನೋಡಿ, ಗಿರೀಶ ಪಾಟೀಲ, ಪ್ರಶಾಂತ ಪಾಟೀಲ, ಶಿವಾನಂದ ಕರೋಶಿ, ಸುಭಾಷ ಪಾಟೀಲ, ಸಂಜು ಪಾಟೀಲ, ಸಂತೋಷ ಪಾಟೀಲ, ಡಾ. ಎಸ್.ಸಿ.ಕಮತೆ, ರಾಜು ಯರಗಟ್ಟಿ, ಮಹಾಲಿಂಗ ಕುಂಬಾರ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಮಠದ, ಉಪಾಧ್ಯಕ್ಷ ಬಸವರಾಜ ಕರಿಶೆಟ್ಟಿ, ಎಂ.ಕೆ. ಚೌಗಲಾ, ಅಣ್ಣಪ್ಪಾ ಮಗದುಮ್ಮ, ಜಿನೇಂದ್ರ ಖಾನಾಪೂರಿ, ನಿಜಲಿಂಗ ಹೂಗಾರ ಸೇರಿದಂತೆ ಇತರರು ಇದ್ದರು.
https://pragati.taskdun.com/satish-jarakiholipdoyamakanamaradibelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ