
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಇಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೇಲ್ನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ನಿಶ್ಚಿತಾರ್ಥಕ್ಕೆ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ, ಅನಸೂಯ ಮತ್ತು ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ತಯಾರಿಗಳು ನಡೆದಿವೆ.
ತಾಜ್ ವೆಸ್ಟೆಂಡ್ನ ಪೂರ್ವ ದಿಕ್ಕಿಗೆ ಇರುವ ಕೋರ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ತಾಜ್‌ವೆಸ್ಟೆಂಡ್ ಹೊಟೇಲ್‌ನಲ್ಲಿರುವ ಮರಗಿಡಗಳ ನಡುವೆ ನಿಶ್ಚಿತಾರ್ಥ ನಡೆಯಬೇಕು ಎಂಬುದು ನಿಖಿಲ್‌ಕುಮಾರ್ ಅವರ ಆಸೆಯಾಗಿತ್ತು.
ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್‌ನಲ್ಲಿ ನಡೆಯಲಿದೆ. ಕಾರ್ಪೇಟ್ ಇಂದ ಹಿಡಿದು ಹುಡುಗ ಹುಡುಗಿ ಉಂಗುರ ಬದಲಾಯಿಸುವ ಮಂಟಪ ಕೂಡಾ ಶ್ವೇತ ವರ್ಣದಿಂದ ಕಂಗೊಳಿಸುತ್ತಿದೆ.
ನಿಶ್ಚಿತಾರ್ಥದ ಮಂಟಪ ಮತ್ತು ನಡೆಯುವ ಜಾಗವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿಯ ಬಣ್ಣದ ತರಹೇವಾರಿ ಹೂಗಳನ್ನು ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‌ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ. ಗಣಪತಿ ಪೂಜೆ ಸಹ ಇರಲಿದೆ, ಜತೆಗೆ ಕುಂಕುಮ ಶಾಸ್ತ್ರವೂ ಈ ಶ್ವೇತ ವರ್ಣದ ಮಂಟಪದಲ್ಲಿ ನಡೆಯಲಿದೆ.
ಇನ್ನು ನಿಖಿಲ್ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರವನ್ನು ಗೇಟಿನ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಕೇರಳದ ಚಂಡೆ ಸಹ ಇರಲಿದೆ. ಹೂವುಗಳಿಂದ ಮಾಡಿದ ಛತ್ರಿಯನ್ನು ಹುಡುಗ ಹುಡುಗಿಗೆ ಹಿಡಿಯಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ