

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸಾಮಿ ಪತ್ನಿ, ಮಗ ಹಾಗೂ ಕುಟುಂದ ಜೊತೆ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಹೊಸ ಸಿನಿಮಾ ಬ್ಯುಸಿಯಲ್ಲಿದ್ದರೂ ನಿಖಿಲ್ ಕುಮಾರಸ್ವಾಮಿ ಮನೆಯವರ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಮಗ ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿ ಅಪ್ಪ-ಅಮ್ಮನ ಜೊತೆ ದೇವರಿಗೆ ನಮಸ್ಕರಿಸುತ್ತಿರುವ ಫೋಟೋ ವೈರಲ್ ಆಗಿದೆ.

ಈ ವೇಳೆ ನಿಖಿಲ್ ತಂದೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ತಾಯಿ ಅನಿತಾ ಹಾಗೂ ಪತ್ನಿ ರೇವತಿ ವರಮಹಾಲಕ್ಷ್ಮಿಗೆ ವಿಶೇಷವಾಗಿ ಪೂಜೆಸಲ್ಲಿಸಿದರು.
ಇನ್ನು ಪೂಜೆಯಲ್ಲಿ ಅಪ್ಪ-ಮಗ ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ನಿಖಿಲ್ ಪ್ರತಿ ಹಬ್ಬವನ್ನ ಮನೆಯವರ ಜೊತೆ ಸೇರಿ ಆಚರಣೆ ಮಾಡುತ್ತಾರೆ ಎಂಬುದು ವಿಶೇಷ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ