CrimeKannada NewsKarnataka NewsLatest
*ಕೆಮಿಕಲ್ ಬಕೆಟ್ಗೆ ಬಿದ್ದು ಮಗು ಸಾವು*: *ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ*

ಪ್ರಗತಿವಾಹಿನಿ ಸುದ್ದಿ: ಆಟವಾಡಲು ಹೋಗಿದ್ದ ವೇಳೆ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದು ಮಗು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಸುಬ್ರಮಣಿ ಮೃತ ದುರ್ದೈವಿ. ನವೆಂಬರ್ 2ರಂದು ಬೆಂಗಳೂರಿನ ಶ್ರೀರಾಮಪುರದಲ್ಲಿ ಘಟನೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕ ವಾಸವಿದ್ದ ಮನೆಯ ಪಕ್ಕದಲ್ಲೇ ಕೆಮಿಕಲ್ ಫ್ಯಾಕ್ಟರಿ ಇತ್ತು. ಆಟವಾಡುತ್ತಿದ್ದ ಸುಬ್ರಮಣಿ ಆಕಸ್ಮಿಕವಾಗಿ ಫ್ಯಾಕ್ಟರಿ ಆವರಣಕ್ಕೆ ತೆರಳಿದ್ದಾನೆ. ಈ ವೇಳೆ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬಿದ್ದಿದ್ದಾನೆ. ತಕ್ಷಣ ಅಲ್ಲಿದ್ದವರು ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಹಲವು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಬಾಲಕ ಮೃತಪಟ್ಟಿದ್ದಾನೆ.
ಬಾಲಕ ಕೆಮಿಕಲ್ ತುಂಬಿದ್ದ ಬಕೆಟ್ಗೆ ಬೀಳುವ ದೃಶ್ಯ ಫ್ಯಾಕ್ಟರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


