
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಜಾತಿ-ಧರ್ಮದ ರಾಜಕಾರಣ ಮಾಡಿಲ್ಲ. ಕೇವಲ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶಾಸಕರಾದ ಮೊದಲ ಐದು ವರ್ಷಗಳಲ್ಲಿ 22 ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಿಸಿದ್ದೆ. ಅದಕ್ಕಾಗಿಯೇ ದೇವರು ಮತ್ತು ಅಲ್ಲಾಹನ ಆಶೀರ್ವಾದದಿಂದ ನನಗೆ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಸ್ಥಾನ ಸಿಕ್ಕಿತು. ಈ ಇಲಾಖೆಯಡಿ ಮುಸ್ಲಿಂ ಸಮುದಾಯದ ಚಿಕ್ಕೋಡಿ ವಿಭಾಗದಲ್ಲಿ 16 ಕೋಟಿ ರೂ. ಮತ್ತು ಸ್ಥಳೀಯ ಕ್ಷೇತ್ರದಲ್ಲಿ ೬ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಬಾಗವಾನಗಲ್ಲಿಯ ಇತರ ಪಕ್ಷದ ಅಪಾರ ಕಾರ್ಯಕರ್ತರನ್ನು ಸೋಮವಾರ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು. ಜೊಲ್ಲೆ ಪರಿವಾರ ಎಂದಿಗೂ ಜಾತಿ ರಾಜಕಾರಣ ಮಾಡುವುದಿಲ್ಲ, ನಮಗೆ ಮಾನವಜಾತಿ ಮಾತ್ರ ಗೊತ್ತು. ಆದ್ದರಿಂದ ಮುಸ್ಲಿಂ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಬಾಂಧವರು ಬಿಜೆಪಿಗೆ ಮತ್ತೊಮ್ಮೆ ಗೆಲ್ಲಿಸಿ ಹ್ಯಾಟ್ರಿಕ್ ಸಾಧನೆಗೆ ಅವಕಾಶ ಮಾಡಿ’ ಎಂದರು.
‘ಪ್ರತಿಪಕ್ಷಗಳು ಜಾತಿ-ಭೇದ ಮಾಡುತ್ತ ಜನರಲ್ಲಿ ಗೊಂದಲ ಸೃಷ್ಟಿಸಿ ಚುನಾವಣೆ ಸಮಯದಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಾವು ಮುಸ್ಲಿಂ ಸಮುದಾಯದ ಅಭಿವೃದ್ಧಿ ನೀತಿಯನ್ನು ಕೈಗೊಂಡು ಉತ್ತಮ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ದರ್ಗಾ, ಮಸೀದಿ, ಕಬ್ರಸ್ತಾನ್, ಈದ್ಗಾ ಮೈದಾನ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರಿನಲ್ಲಿ ಹತ್ತು ಸಾವಿರ ಜನರ ಹಜ್ ಭವನ ನಿರ್ಮಾಣಕ್ಕೆ ಬಿಜೆಪಿ ಯಶಸ್ವಿ ಪ್ರಯತ್ನ ಮಾಡಿದೆ. ನಿಮ್ಮೊಂದಿಗಿದ್ದು, ಯಾವುದೇ ಸಮಸ್ಯೆ ಎದುರಾದರೂ ಸಹಾಯ ಮಾಡಲು ಸದಾ ಸಿದ್ಧ’ ಎಂದರು.
ಬಾಗವಾನ ಗಲ್ಲಿಯ ನಗರಸಭೆ ಮಾಜಿ ಸದಸ್ಯ ಜುಬೇರ್ ಬಾಗವಾನ್ ತಮ್ಮ ಬೆಂಬಲಿಗರೊAದಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬೆಂಬಲ ಸೂಚಿಸಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ ದಾಢಿವಾಲೆ ಮಾತನಾಡಿ, ಜೊಲ್ಲೆ ಕುಟುಂಬಕ್ಕೂ ನಮಗೂ ಬಾಲ್ಯದಿಂದಲೂ ಸಂಬAಧವಿದೆ. ನಮ್ಮ ಸಮುದಾಯದವರು ಸಚಿವರಾಗಿದ್ದರೂ ಅನೇಕರು ನಮ್ಮ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಆದರೆ ಸಚಿವೆ ಜೊಲ್ಲೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಅವರ ಜೊತೆ ಎಲ್ಲ ಮುಸ್ಲಿಂ ಸಮುದಾಯದವರು ನಿಲ್ಲುವುದು ಅವಶ್ಯವಾಗಿದೆ. ಅವರು ಮತ್ತೊಮ್ಮೆ ಆಯ್ಕೆಯಾದರೆ ಸಮಾಜದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸದಸ್ಯ ರಾಜೇಂದ್ರ ಗುಂಡೇಶಾ, ಅಭಿನಂದನ ಮುದಕುಡೆ, ರಾಜೇಶ ಕೊಠಡಿಯಾ, ಸೋನಾಲಿ ಉಪಾಧ್ಯೆ, ಮುದಸ್ಸರ್ ಬಾಗವಾನ, ಅಜೀಂ ಬಾಗವಾನ, ಸಾಹಿಲ್ ಬಾಗವಾನ, ಜಾವೇದ್ ಬಾಗವಾನ, ರಫೀಕ್ ಬಾಗವಾನ, ಅನೀಸ್‌ಅಹಮದ್ ಬಾಗವಾನ, ಅಬುಬಕರ್ ಬಾಗವಾನ, ಮೂಸಾ ಬಾಗವಾನ, ಹರ್ಷದ್ ಬಾಗವಾನ, ಸಮೀರ್ ಕಾಜಿ, ಮುಬಾರಕ್ ಕಾಜಿ, ಶಾಹಿದ್ ಬಾಗವಾನ, ರಫೀಕ್ ಗುಡವಾಲೆ, ವಾಸಿಂ ಬಾಗªನ, ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ