ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಮತ್ತಿವಡೆ ಗ್ರಾಮದಲ್ಲಿ ಈವರಗೆ ರೂ.6.67 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇನ್ನುಳಿದ ಕಾಮಗಾರಿಗಳಿಗೆ ಶೀಘ್ರದಲ್ಲಿ ಅನುಮೋದನೆ ಪಡೆದು ಅನಿಷ್ಠಾನಗೊಳಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಿಪ್ಪಾಣಿ ತಾಲ್ಲೂಕಿನ ಮತ್ತಿವಡೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತ್ತಿವಡೆ ಗ್ರಾಮದಿಂದ ಶೆಂಡೂರ್ ರಸ್ತೆ ಕಾಮಗಾರಿಗೆ ರೂ. 70 ಲಕ್ಷಗಳ ಮತ್ತು ಜನಜೀವನ ಮಿಶನ್ ಯೋಜನೆಯ ರೂ. 1 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಲನ ಚವ್ಹಾಣ, ಸದಸ್ಯ ಜಯಸಿಂಗ್ ಮೋರೆ, ರಾಜೇಶ ಜಿಂಗಳೆ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ, ಆರ್. ಎಮ್. ಖೊತ, ಸಮೀತ ಸಾಸನೆ, ಪ್ರಕಾಶ ಶಿಂಧೆ, ಶಿವಗೊಂಡಾ ಪಾಟೀಲ, ಬಾಪುಸಾಹೇಬ ದೇಶಪಾಂಡೆ, ಅಣ್ಣಾಸಾಹೇಬ ಕೇಸರಕರ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಿಂದ 5 ಜನರ ಗಡಿಪಾರು ಮಾಡಿ ಪೊಲೀಸರ ಆದೇಶ
https://pragati.taskdun.com/police-order-to-deport-5-people-from-belgaum/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ