ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಕ್ಷೇತ್ರದ ಸಮುದಾಯದೊಂದಿಗೆ ಸದಾ ಇರುತ್ತೇನೆ. ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಹೆಚ್ಚಿನ ಮತದೊಂದಿಗೆ ಗೆಲ್ಲಿಸಿದ್ದೀರಿ. ಅದೇ ರೀತಿ ಈ ಬಾರಿಯೂ ಹೆಚ್ಚಿನ ಮತದೊಂದಿಗೆ ಬೆಂಬಲ ನೀಡಿ ಎಂದು ಸ್ಥಳೀಯ ಶಾಸಕರು ಹಾಗೂಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.
ನಿಪ್ಪಾಣಿ ನಗರದ ಸಾಖರವಾಡಿ, ಜತ್ರಾಟವೇಸ್, ಜಿಜಾಮಾತಾ ಚೌಕ ನಲ್ಲಿ ಕಾರ್ನರ್ ಸಭೆ ನಡೆಸಿ ಮತಯಾಚನೆ ಮಾಡಿದರು. ಮಾತನಾಡಿದ ಅವರು, ಕಳೆದ 10 ವರ್ಷದಲ್ಲಿ ನಿಪ್ಪಾಣಿ ನಗರದಲ್ಲಿ 450 ಕೋಟಿ ಅಧಿಕ ಅಭಿವೃದ್ದಿಯ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನಗರದಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ, ದೇವಸ್ಥಾನ ಜೀರ್ಣೋದ್ದಾರ, ಸಾಂಸ್ಕೃತಿಕ ಭವನ, ಪ್ರವಾಸಿ ಮಂದಿರ,ಪೊಲೀಸ ಠಾಣೆ, ಪೊಲೀಸ ವಸತಿ ಗೃಹ, ಮಾದರಿ ಜಿ+2 ಯೋಜನೆಯಡಿ 2052 ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ, ಬಸ್ ನಿಲ್ದಾಣ 5.60 ಕೋಟಿ ರೂಪಾಯಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ 8 ಕೋಟಿ ರೂಪಾಯಿ ನಿರ್ಮಾಣ,ಹಿಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಆಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಕ್ಷೇತ್ರದ ಬಿಜೆಪಿ ಪ್ರಮುಖರು ಮತ್ತು ನೂರಾರು ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಅ ಜೊಲ್ಲೆ ಅವರಿಗೆ ಸಾಥ್ ನೀಡಿದರು.
ಇದೇ ವೇಳೆ ಫುಲೆ ಶಾಹು ಅಂಬೇಡ್ಕರ ಸಾಮಾಜಿಕ-ಸಾಂಸ್ಕತಿಕ ಸಂಘದ ಅಮೀತ ಕಾಂಬಳೆ, ವಿಕ್ಕಿ ಕಾಂಬಳೆ, ಸೂರಜ ಕಾಂಬಳೆ, ಶಿವರಾಜ್ ಕಾಂಬಳೆ, ಚೇತನ ಶಿಂಧೆ, ರೋಹಿತ ಮಡ್ಡೆ, ಅಕ್ಷಯ ಗಸ್ತೆ, ಮನೋಜ್ ಸಾವಂತ, ರಮೇಶ ವಾಳಕೆ, ಅದೀಪ ಕಾಂಬಳೆ, ನಿತಿನ ಕಾಂಬಳೆ, ಉತ್ತಮ ವಾಳಕೆ, ವಿನೋದ ಸೆಟ್ಟನ್ನವರ, ಸಾಗರ ಜಾಧವ, ಸೌ. ಮೇಘಾ ಕಾಂಬಳೆ, ಸೌ. ಮಿಲನ ಕಾಂಬಳೆ, ಸೌ.ಸ್ವಾತಿ ಕಾಂಬಳೆ, ಸೌ.ಮನಿಷಾ ಭೋಸಲೆ, ಸೌ.ಬಬಿತಾ ವಾಳಕೆ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಆತ್ಮೀಯವಾಗಿ ಸಚಿವೆ ಶಶಿಕಲಾ ಜೊಲ್ಲೆ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕೊಲ್ಲಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರಿ ಸಮರಜೀತಸಿಂಹ ಘಾಟಗೆ, ಹಾಗಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ,ನಗರಸಭೆ ಅಧ್ಯಕ್ಷರಾದ ಜಯವಂತ ಭಾಟ ಲೆ, ಬಿಜೆಪಿ ನಗರ ಅಧ್ಯಕ್ಷರಾದ ಪ್ರಣವ ಮಾನವಿ, ಪ್ರಭಾವತಿ ಸೂರ್ಯವಂಶಿ, ಮಹೇಶ ಸೂರ್ಯವಂಶಿ, ವಿನಾಯಕ ಸುಳಕುಡೆ, ಅವಿನಾಶ ಮಾನೆ,ದೀಪಕ ಮಾನೆ, ಸುಜಾತಾ ಮಾನೆ, ಸಂದೀಪ ಮಾನೆ, ಸಂತೋಷ ತಿಗಡೆ ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ