ಪ್ರಗತಿವಾಹಿನಿ ಸುದ್ದಿ; ಗದಗ : ಕಲೆ,ಸಾಹಿತ್ಯ,ಸಂಗೀತ,ಸಂಸ್ಕೃತಿ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಕಾಳಜಿ ಹೊಂದಿ , ಅಕ್ಷರ ಸಂಸ್ಕೃತಿಯ ಜೊತೆಗೆ ಪುಸ್ತಕ ಪ್ರೀತಿಯನ್ನು ಕಾಪಿಟ್ಟು ಕೊಟ್ಟು ಬರುತ್ತಿರುವ ನಿರಂತರ ಪ್ರಕಾಶನ, ಹಾಗೂ ಮಕಾನದಾರ ಸಾಹಿತ್ಯ ಪ್ರತಿಷ್ಠಾನವು ಪ್ರತಿ ವರುಷ ಸೃಜನಶೀಲ ಕವಿ,ಕಲಾವಿದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರೋತ್ಸಾಹಿಸುವ ಸಲುವಾಗಿ 2010ನೆ ಸಾಲಿನಿಂದ ಗುರುತಿಸಿ ಗೌರವಿಸುತ್ತಲೇ ಬಂದಿದೆ.
ಈ ಬಾರಿ ಮಹಾರಾಷ್ಟ್ರ ರಾಜ್ಯ ದ ಮೈ0ದರ್ಗಿಯ ಗಡಿನಾಡು ಕನ್ನಡಿಗ ಸೃಜನಾಶೀಲ ಬರಹಗಾರ, ಗಜಲ್ ಕವಿ, ಶಿಕ್ಷಕ ,ಗಿರೀಶ್ ಜಕಾಪುರೆ ಅವರು 2020ನೇ ಸಾಲಿಗಾಗಿ ಮತ್ತುವಿಜಯಪುರ ಕೇಂದ್ರ ಕಾರಾ ಗೃಹದ ಅಧೀಕ್ಷಕ ಜೈಲು ಹಕ್ಕಿಗಳ ಶಿಕ್ಷೆ, ಅಪರಾಧ ಮತ್ತು ಅಪರಾಧಿಗಳ ಸುಧಾರಣೆ ಕುರಿತು ಆಳ ಅಧ್ಯಯನ ಮಾಡಿರುವ ರಾಷ್ಟ್ರ, ಅಂತರರಾಷ್ಟೀಯ ಮಟ್ಟದ ಇಲಾಖೆಯ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಸಾಹಿತಿ,ಡಾ ಐ. ಜೆ. ಮ್ಯಾಗೇರಿ ಅವರು 2021ನೆ ಸಾಲಿನ ನಿರಂತರ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ನಿರಂತರ ಪ್ರಕಾಶನದ ಪ್ರಕಾಶಕರಾದ ಸಾಯಿರಾಬಾನು. ಎ.ಮಕಾನದಾರ ಮತ್ತು ಸಾಹಿತ್ಯ ಪ್ರತಿಷ್ಠಾನದ ಸಂಚಾಲಕ ಎಂ.ಎಸ್. ಮಕಾನದಾರ ತಿಳಿಸಿದ್ದಾರೆ.
ಬೆಳಗಾವಿ : ಲಂಚ ಸ್ವೀಕರಿಸಿದ ಗಂಡ, ಹೆಂಡತಿ ಇಬ್ಬರಿಗೂ ಜೈಲು ಶಿಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ