ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವದ 100 ಶಕ್ತಿಶಾಲಿ ಮಹಿಳೆಯರ ಪೋರ್ಬ್ಸ್ ಪಟ್ಟಿ ಸೇರಿದ್ದಾರೆ. ಈ ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ 17 ಜನರು ಹೊಸಬರ ಹೆಸರಿದ್ದು, ಕೋವಿಡ್ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಫೋರ್ಬ್ಸ್ ಪಟ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ 41ನೇ ಸ್ಥಾನದಲ್ಲಿದ್ದು, ಭಾರತದ ಅತ್ಯಂತ ಶ್ರೀಮಂತ ಸ್ವಯಂ ಶಕ್ತಿಯಿಂದ ಮೇಲೇರಿದವರು ಎಂಬ ಖ್ಯಾತಿ ಪಡೆದಿರುವ ಕಿರಣ್ ಮಜುಂದಾರ್ ಶಾ 68ನೇ ಸ್ಥಾನ ಹಾಗೂ ಲ್ಯಾಂಡ್ ಮಾರ್ಕ್ ಗ್ರೂಪ್ ನ ಅಧ್ಯಕ್ಷೆ ರೇಣುಕಾ ಜಗ್ತಿಯಾನಿ 98ನೇ ಸ್ಥಾನ ಪಡೆದಿದ್ದಾರೆ.
ಏಂಜೆಲಾ ಮಾರ್ಕೆಲ್ ನಿರಂತರವಾಗಿ 10 ವರ್ಷಗಳಿಂದ ಮೊದಲ ಸ್ಥಾನದಲಿದ್ದಾರೆ. ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಫೋರ್ಬ್ಸ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ