Kannada NewsKarnataka NewsLatestPolitics

*ಹಸಿ ಹಸಿ ಸುಳ್ಳು ಹೇಳುತ್ತ ಒಣ ಪ್ರತಿಷ್ಠೆ ತೋರುತ್ತಿದೆ ಕರ್ನಾಟಕ ಸರ್ಕಾರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗರಂ*

ಕರ್ನಾಟಕಕ್ಕೆ NDAದ್ದೇ ಭಾರೀ ಹಣ: ತೆರಿಗೆ ಹಂಚಿಕೆಯಲ್ಲಿ ಯುಪಿಎಗಿಂತ ಶೇ.159ರಷ್ಟು ಹಣ ನೀಡಿದೆ ಕೇಂದ್ರ

ಪ್ರಗತಿವಾಹಿನಿ ಸುದ್ದಿ: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅಸಮಾನತೆ ತೋರಿಲ್ಲ. ಯುಪಿಎ ಅವಧಿಗಿಂತ ಶೇ.159ರಷ್ಟು ಭಾರಿ ಹೆಚ್ಚು ಹಣವನ್ನು ನೀಡಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಬೀತು ಪಡಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದ್ದಾರೆ

ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಸಮಾನತೆ ತೋರಿದೆ. ರಾಜ್ಯಕ್ಕೆ 5 ವರ್ಷದಲ್ಲಿ ₹ 62,098 ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ತಜ್ಞರ ಸಂಸ್ಥೆ ಹಣಕಾಸು ಆಯೋಗ ಪ್ರತಿ ರಾಜ್ಯಕ್ಕೂ ತೆರಿಗೆ ನಿಧಿಯ ಮೊತ್ತವನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

ಕರ್ನಾಟಕಕ್ಕೆ 1.92 ಲಕ್ಷ ಕೋಟಿ: ಯುಪಿಎ ಅವಧಿಯಲ್ಲಿ ಕರ್ನಾಟಕ ಸುಮಾರು ₹ 74,376 ಕೋಟಿ ಹಣ ಪಡೆದಿತ್ತು. ಆದರೆ ಎನ್‌ಡಿಎ ದುಪ್ಪಟ್ಟು ಮೊತ್ತ ನೀಡಿದೆ. 2021-22 ರಿಂದ 2025-26ರ ಅವಧಿಗೆ ₹1,92,514 ಕೋಟಿ ತೆರಿಗೆ ಹಂಚಿಕೆ ನಿಧಿ ಪಡೆಯುತ್ತಿದೆ ಎಂದು ದಾಖಲೆ ಸಮೇತ ಸಾಬೀತು ಪಡಿಸಿದ್ದಾರೆ.

₹4,659 ಬರ ಪರಿಹಾರ: 2021-₹4,659.2022 ಮತ್ತು 2025-26ರ ನಡುವಿನ 5 ವರ್ಷಗಳವರೆಗೆ ಕರ್ನಾಟಕಕ್ಕೆ ಒಟ್ಟು ₹4,659.20 ಕೋಟಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
2021-22 ರಿಂದ 2023-24ರವರೆಗೆ ಮೋದಿ ಸರ್ಕಾರ ತನ್ನ ಪಾಲಿನ ₹1,681.60 ಕೋಟಿ ಪರಿಹಾರ ವಿತರಿಸಿದೆ. ಕರ್ನಾಟಕಕ್ಕೆ ಎನ್‌ಡಿಆರ್‌ಎಫ್‌ನಂತೆ ₹2,563.13 ಕೋಟಿ ಹೆಚ್ಚುವರಿ ಪೂರಕ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಭದ್ರಾ ಮೇಲ್ದಂಡೆಗೆ ಕರ್ಣಾಟಕ ಸರ್ಕಾರ ಇಟ್ಟಿಲ್ಲ ಹಣ: ಮೋದಿ ಸರ್ಕಾರ ಫೆಬ್ರವರಿ 2023 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿದ್ದೆಲ್ಲದೆ ₹ 5,300 ಕೋಟಿ ನಿಗದಿಪಡಿಸಿ ಮೀಸಲಿಟ್ಟಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜುಲೈ 2023-24ರ ಬಜೆಟ್‌ನಲ್ಲಿ ಯೋಜನೆಗೆ ನಿಗದಿಪಡಿಸಿದ್ದು ಶೂನ್ಯ ಅನುದಾನ ಎಂದು ತಿಳಿಸಿದ್ದಾರೆ.

Related Articles

Back to top button