ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಬಾದಿತವಾದ ವಿವಿಧ ವಲಯಗಳಿಗೆ ಕೇಂದ್ರ ಸರ್ಕಾರ 8 ಅಂಶಗಳ ವಿಶೇಷ ಆರ್ಥಿಕ ನೆರವನ್ನು ಘೋಷಣೆ ಮಾಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವೈದ್ಯಕೀಯ ಮೂಲಸೌಕರ್ಯಕ್ಕೆ 50,000 ಕೋಟಿ ಹಾಗೂ ಉಳಿದ ವಲಯಗಳಿಗೆ 60,000 ಕೋಟಿ ಅನುದಾನ ಘೋಷಿಸಿದರು.
ಕಳೆದ ವರ್ಷ ಘೋಷಿಸಿದ್ದ ತುರ್ತು ಕ್ರೆಡಿಟ್ ಲಿಂಕಿಂಗ್ ಸ್ಕೀಮ್ ಗೆ ಹೆಚ್ಚುವರಿ 1.5 ಲಕ್ಷ ಕೋಟಿ ಘೋಷಣೆ
ಶೇ.7.95ರ ಬಡ್ಡಿದರದಲ್ಲಿ 8 ಮಹಾನಗರ ಹೊರತುಪಡಿಸಿ ಉಳಿದೆಡೆ ಆರೋಗ್ಯ ಸೌಕರ್ಯಕ್ಕೆ ಸಾಲ ಸೌಲಭ್ಯ
ಮೈಕ್ರೋ ಫೈನಾನ್ಸ್ ಮೂಲಕ 25 ಲಕ್ಷ ಜನರಿಗೆ ಸಾಲ-ಸಾಲ ಮರುಪಾವರಿಗೆ 3 ವರ್ಷ ಅವಕಾಶ
5,00,000 ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ
11,000ಕ್ಕೂ ಅಧಿಕ ನೊಂದಾಯಿತ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದವರೆಗೆ ಸಾಲ ಸೌಲಭ್ಯ
ಟೂರಿಸ್ಟ್ ಏಜನ್ಸಿ ಹಾಗೂ ಇತರ ಪ್ರವಾಸೋದ್ಯಮ ವಲಯಗಳಲ್ಲಿ ತೊಡಗಿಸಿಕೊಂಡವರಿಗೆ 10 ಲಕ್ಷದ ವರೆಗೆ ಸಾಲ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ
ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆ ವಿಸ್ತರಣೆ
ಕೃಷ್ಣಾ ನದಿಯಲ್ಲಿ ಮುಳುಗಿದ ನಾಲ್ವರು ಸಹೋದರರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ