
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ದೇಶದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ರಾಷ್ಟ್ರದ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಮೂಲಸೌಕರ್ಯ ವಲಯವು ಆದ್ಯತೆ ಪಡೆದಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ (ಗ್ರಾಮೀಣ) ಡಾ ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಎಲ್ಲಾ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಒತ್ತು ನೀಡಲಾಗಿದೆ. ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲೀಕರಣದಿಂದಾಗಿ ದೇಶಾದ್ಯಂತ ಪ್ರತಿ ನಾಗರಿಕರ ಆರೋಗ್ಯ ದಾಖಲೆಗಳು ದೊರೆಯುವಂತಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಬಜೆಟ್ ಟೆಲಿ- ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೊಳಿಸಿರುವುದು ಸರಿಯಾದ ಹೆಜ್ಜೆಯಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ಬಜೆಟ್ ತುಂಬಾ ಸಮತೋಲಿತವಾಗಿದೆ. ಉದ್ಯೋಗಗಳನ್ನು ಸೃಷ್ಟಿಸುವ, ಉತ್ಪಾದನೆಯನ್ನು ಉತ್ತೇಜಿಸುವ, ಕೃಷಿ -ಆರ್ಥಿಕತೆ ಮತ್ತು ಮೂಲಸೌಕರ್ಯ ಸೃಷ್ಟಿಗೆ ಸಹಾಯ ಮಾಡುವ ಬಜೆಟ್ ಇದಾಗಿದೆ. ಪರಿಸರ ಆಧಾರಿತ ಆರೋಗ್ಯ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೊಳಿಸಲು ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
62 ವರ್ಷದ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರ ಸಬಲೀಕರಣಕ್ಕೆ ಸೂಕ್ಷ್ಮವಾದ ಸಲಹೆಗಳನ್ನು ನೀಡಿದ್ದಾರೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಿದ್ದಾರೆ. ಮಾನಸಿಕ ಆರೋಗ್ಯ, ಡಿಜಿಟಲ್ ಎಜುಕೇಶನ್, ತೆರಿಗೆ ವಿನಾಯಿತಿ ಮೊದಲಾದವುಗಳಲ್ಲಿ ಇದನ್ನು ಕಾಣಬಹುದು.
ಸಾಮಾನ್ಯವಾಗಿ ವಿಷಯಗಳಿಗೆ ಬಳಸಲಾಗುವ ವಿಶಿಷ್ಟವಾದ ವೈಯಕ್ತಿಕ ನಾಮಪದ ಅಥವಾ ಸರ್ವನಾಮ “ಅವನು” ಬದಲಿಗೆ, ಹಣಕಾಸು ಸಚಿವರು “ಆಕೆ” ರಿಟರ್ನ್ಸ್ ಸಲ್ಲಿಸುವಾಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾರೆ ಎಂದು ಹೇಳಿದರು. ಇದು ಹಳೆಯ ಸಾಂಪ್ರದಾಯಿಕ ಪದ್ಧತಿಗೆ ತಿಲಾಂಜಲಿ ಹಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡುತ್ತದೆ. ಅತ್ಯಂತ ಪ್ರಮುಖವಾಗಿ ಗಮನ ಸೆಳೆಯುತ್ತದೆ.
ಒಟ್ಟಾರೆ ಕೇಂದ್ರ ಬಜೆಟ್ ಸರ್ವರೂ ಮೆಚ್ಚುವಂತಹ, ಸರ್ವರ ಏಳ್ಗೆಗೆ ಸಹಕರಿಸುವ, ಸರ್ವರೂ ಸ್ವಾಗತಿಸುವಂತಹ ಬಜೆಟ್ ಆಗಿದೆ ಎಂದು ಸರ್ನೋಬತ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸಾವಿರ ಗಡಿ ದಾಟಿದ 3ನೇ ಅಲೆ ಕೊರೋನಾ; ರಾಮದುರ್ಗದಲ್ಲಿ ಮಹಾಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ