ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆೆ ಮಾಡಿದ ದೃಷ್ಟಿ ಮಾಂದ್ಯ ವಿದ್ಯಾರ್ಥಿಯನ್ನು ಇಲ್ಲಿಯ ನಿಯತಿ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಶ್ರೇಯಸ್ ಪಾಟೀಲ ಎನ್ನುವ ದೃಷ್ಟಿ ಮಾಂದ್ಯ ವಿದ್ಯಾರ್ಥಿ ಶೇ.86.42 ಅಂಕಗಳೊಂದಿಗೆ ಎಸ್ಎಸ್ಎಲ್ ಸಿಯಲ್ಲಿ ಉತ್ತೀರ್ಣನಾಗಿದ್ದಾನೆ.
ನಿಯತಿ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸೊನಾಲಿ ಸರ್ನೋಬತ್ ಮತ್ತು ಡಾ. ಸಮೀರ್ ಸರ್ನೋಬತ್ ವಿದ್ಯಾರ್ಥಿಯನ್ನು ಗೌರವಿಸಿದರು.
ಬಾತ್ಕಾಂಡೆ ಶಾಲೆಯ ಚೇರಮನ್ ಮಿಲಿಂದ್ ಬಾತ್ಕಾಂಡೆ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಇತರ ಎಲ್ಲ ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲೇ ಅಧ್ಯಯನ ಮಾಡಿದ್ದಾನೆ.
ತಂದೆ ಮಹಾಂತೇಶ ಪಾಟೀಲ್ ಮತ್ತು ಜಿಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ತಾಯಿ ತಮ್ಮ ವಿಶೇಷ ಚೇತನ ಮಗುವನ್ನು ಪ್ರೋತ್ಸಾಹಿಸುತ್ತ ಬೆಳೆಸಿದ್ದಾರೆ.
ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ಡಾ ಸಮೀರ್ ಮತ್ತು ಡಾ ಸೊನಾಲಿ ಸರ್ನೋಬತ್ ಪ್ರಶಂಸಿಸಿದರು.
ನಿಯತಿ ಫೌಂಡೇಶನ್ ವಿಶಿಷ್ಟ ಸಾಧನೆ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಸದಾ ಬೆಂಬಲ ನೀಡುತ್ತದೆ ಎಂದು ಸೋನಾಲಿ ತಿಳಿಸಿದರು.
Niyathi foundation felicitated exceptional student
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ