
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ನಿಯತಿ ಫೌಂಡೇಶನ್ ಕೊರೆನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ಗಳನ್ನು ವಿತರಿಸಲು ಮುಂದಾಗಿದೆ.
ಈಗಾಗಲೆ ಸುಮಾರು 3 ಸಾವಿರಕ್ಕೂ ಹೆಚ್ಚು ಕಿಟ್ ಗಳು ಸಿದ್ಧವಾಗಿವೆ.
ಇಂದು ವಿಶ್ವ ತಾಯಂದಿರ ದಿನದ ಸಂದರ್ಭದಲ್ಲಿ ೊಬ್ಬಂಟಿಯಾಗಿರುವ ತಾಯಂದಿರನ್ನು ಗುರುತಿಸಿ ಅವರಿಗೆ ಕನಿಷ್ಠ 15 ದಿನದ ಲಾಕ್ ಡೌನ್ ಸಂದರ್ಭಕ್ಕೆ ಈಗುವಷ್ಟು ವಿವಿಧ ರೀತಿಯ ದಿನಸಿಗಳನ್ನು ಹಂಚಲಾಗುತ್ತಿದೆ.
ದಿನಗೂಲಿ ಅಥವಾ ಕನಿಷ್ಠ ಸಂಬಳದಲ್ಲಿ ಜೀವನ ನಡೆಸುವವರಿಗೆ ದಿನಸಿಗಳನ್ನು ವಿತರಿಸಲಾಗುವುದು ಎಂದು ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.
ಮೊಜದಲ ಬಾರಿ ಲಾಕ್ ಡೌನ್ ಆದ ಸಂದರ್ಭದಲ್ಲೂ ನಿಯತಿ ಫೌಂಡೇಶನ್ ದಿನಸಿ, ಇಮ್ಯುನಿಟಿ ಹೆಚ್ಚಿಸುವ ಔಷಧ, ಮಾಸ್ಕ್, ಪಿಪಿಇ ಕಿಟ್ ಮೊದಲಾದವುಗಳನ್ನು ವಿತರಿಸಿದೆ.
ಈಗ ದಿನಸಿ ಕಿಟ್ ಜೊತೆಗೆ ಅಗತ್ಯವಿರುವವರಿಗೆ ಆಯುಷ್ ಔಷಧಗಳನ್ನು ಸಹ ಪೂರೈಸಲಾಗುವುದು ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ