*ನಿಯತಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್,ಉಪಾಧ್ಯಕ್ಷಾರಾಗಿ ಭರತ್ ರಾಥೋಡ್ ಆಯ್ಕೆ !*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗೆ ನಿಯತಿ ಕೋ-ಆಪರೇಟಿವ್ ಸೊಸೈಟಿಯ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಡಾ.ಸೋನಾಲಿ ಸರ್ನೋಬತ್ ಮತ್ತು ಭರತ್ ರಾಥೋಡ್ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರೋನಾ ಅವಧಿಯಲ್ಲಿ ನಿಯತಿ ಸೊಸೈಟಿಯನ್ನು ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ.ಸಮೀರ್ ಸರ್ನೋಬತ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಲ್ಪಾವಧಿಯಲ್ಲಿ ಸೊಸೈಟಿಯನ್ನು ಲಾಭದಾಯಕವಾಗಿಸಿದರು.
ಇತ್ತೀಚೆಗೆ ನಡೆದ ನಿಯತಿ ಕೋ-ಆಪರೇಟಿವ್ ಸೊಸೈಟಿಯ ಚುನಾವಣಾ ಪ್ರಕ್ರಿಯಲ್ಲಿ ಡಾ.ಸೋನಾಲಿ ಸರ್ನೋಬತ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದು, ಭರತ್ ರಾಥೋಡ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅನೂಪ್ ಜವಳಕರ (ಖ್ಯಾತ ಬಿಲ್ಡರ್), ರೋಹಿತ್ ದೇಶಪಾಂಡೆ (ಕೈಗಾರಿಕೋದ್ಯಮಿ), ಭಾಸ್ಕರ್ ಪಾಟೀಲ್ (ವಕೀಲ), ಪ್ರಕಾಶ್ ಮುಗ್ಳಿ (ಕೈಗಾರಿಕೋದ್ಯಮಿ), ನರಸಿಂಗ್ ಜೋಶಿ (ತೆರಿಗೆ ಸಲಹೆಗಾರ), ಗಜಾನನ್ ರಾಮನಕಟ್ಟಿ (ಉದ್ಯಮಿ), ಪ್ರಸಾದ್ ಘಾಡಿ (ಉದ್ಯಮಿ), ಭೂಷಣ್ ರೇವಣ್ಕರ್ (ಉದ್ಯಮಿ), ಸುನೀತಾ ಪವಾರ್ (ಉದ್ಯಮಿ), ಶ್ರೀಮತಿ ವರದಾ ಹಪ್ಪಳಿ (ಕೈಗಾರಿಕೋದ್ಯಮಿ), ಶ್ರೀಮತಿ ಮಂಜುಳಾ ಹೆಗಡೆ (ಮಹಿಳಾ ಮಂಡಲ ಸಂಯೋಜಕಿ ) ಇವರು ನಿರ್ದೆಶಕರಾದರು. ಚೀಫ್ ಮ್ಯಾನೇಜರ್ ಶ್ರೀಮತಿ ಅನುಷಾ ಜೋಶಿ ಮತ್ತು ಶ್ರೀಮತಿ. ದೀಪಾ ಪ್ರಭುದೇಸಾಯಿ ಉಪಸ್ಥಿತರಿದ್ದರು.
ಮಾಜಿ ಮೇಯರ್ ವಿಜಯ್ ಮೋರೆ, ತೆರಿಗೆ ಸಲಹೆಗಾರ ಸಂದೀಪ್ ಖನ್ನುಕರ್, ಸವಿತಾ ಕಾಂಬ್ಳೆ, ನಾಗರತ್ನ ರಾಮಗೊಂಡ, ಕಿಶೋರ್ ಕಾಕಡೆ, ಮಿಲಿಂದ್ ಪಾಟೀಲ್, ಶೀತಲ್ ಚಿಲ್ಮಿ ಉಪಸ್ಥಿತರಿದ್ದರು.
ಸೊಸೈಟಿಯು ಎರಡು ಶಾಖೆಗಳನ್ನು ಹೊಂದಿದೆ. ಮೇಜರ್ ಬ್ರಾಂಚ್ ಪಿ. ಗಾಡ್ಗೀಳ್ ಗೋಲ್ಡ್ ಶೋರೂಂ ಕಟ್ಟಡದ ಎರಡನೇ ಮಹಡಿಯಲ್ಲಿದೆ ಮತ್ತು ಎರಡನೇ ಶಾಖೆ ಫುಲ್ಬಾಗ್ ಸ್ಟ್ರೀಟ್ನಲ್ಲಿದೆ. ಮೂರನೇ ಶಾಖೆಯನ್ನು ಶೀಘ್ರದಲ್ಲೇ ಖಾನಾಪುರದಲ್ಲಿ ತೆರೆಯಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ