*ಯಾರ ಆಸ್ತಿಯನ್ನು ತೆರೆವುಗೊಳಿಸಲ್ಲ: ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ನಾಲಾ ಕಾಮಗಾರಿ: ಶಾಸಕ ಅಭಯ ಪಾಟೀಲ್*

ಪ್ರಗತವಾಹಿನಿ ಸುದ್ದಿ: ಬೆಳಗಾವಿಯ ಆನಂದ ನಗರ ಒಂದನೇ ಅಡ್ಡರಸ್ತೆಯ ನಾಲಾ ಕಾಮಗಾರಿಯನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಭರವಸೆ ನೀಡಿದರು.
ಆನಂದ ನಗರ, ಒಂದನೇ ಅಡ್ಡರಸ್ತೆ ವಡಗಾವದಲ್ಲಿ ಹರಿಯುತ್ತಿರುವ ನಾಲಾ ಅಭಿವೃದ್ಧಿ ಕಾಮಗಾರಿಯಿಂದಾಗಿ ದಲಿತ ಕುಟುಂಬಗಳು ಬೀದಿಗೆ ಬರಲಿವೆ ಆದ್ದರಿಂದ ಈ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಶಾಸಕ ಅಭಿಯ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾಮಗಾರಿ ಆರಂಭಿಸುತ್ತಿರುವುದರಿಂದ ಇಲ್ಲಿರುವ ರೈತರಿಗೆ ತೊಂದರೆ ಉಂಟಾಗಲಿದೆ ಎಂಬ ಊಹಾಪೋಹ ಸೃಷ್ಟಿಯಾಗಿದೆ. ಆದ್ದರಿಂದ ಈ ಕಾಮಗಾರಿಯನ್ನು ಆರಂಭಿಸುವ ಮುನ್ನ ದಲಿತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, ಕಾಮಗಾರಿಯ ವೇಳೆ ಯಾರ ಮನೆಯನ್ನೂ ತೆರವುಗೊಳಿಸಲಾಗುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮಾಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆನಂದ ನಗರ ಒಂದನೇ ಅಡ್ಡರಸ್ತೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ