Politics

*ಅಧಿವೇಶನದಲ್ಲಿ ಊಟೋಪಚಾರಕ್ಕೆ ಖರ್ಚು ಮಾಡಲು ಅವಕಾಶ ಇಲ್ಲ: ಭೀಮಪ್ಪ ಗಡಾದ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಧಿವೇಶನದಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಊಟೋಪಚಾರ ವ್ಯವಸ್ಥೆಗೆ ನಿಮಿಷಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಊಟ ಮತ್ತು ಉಪಚಾರ ಮಾಡಲು ಅವಕಾಶ ಇದೆಯೇ ಎಂದು ಆರ್ ಟಿ ಐ ಅರ್ಜಿ ಹಾಕಿದ್ದ ಬಳಿಕ ಊಟೋಪಚಾರ, ಟೀ ಕಾಫೀ ತಂಪು ಪಾನೀಯ ಈ ರೀತಿ ಹಣ ಖರ್ಚು ಮಾಡಲು ಅವಕಾಶವಿಲ್ಲ ಎಂದು ಉತ್ತರ ಬಂದಿದೆ ಎಂದು ಭೀಮಪ್ಪ ಗಡಾದ ಹೇಳಿದರು.

ಅಧಿವೇಶನದಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ.  ಇದಕ್ಕೆ ಸಭಾಧ್ಯಕ್ಷರು ಉತ್ತರ ಕೊಡಬೇಕು. 2500 ರೂ ದಿನಭತ್ಯೆ ಶಾಸಕರು ಪಡೆದುಕೊಳ್ಳುತ್ತಿದ್ದು, ಒಂದು ಕೀಮಿಗೆ ₹35ರೂ ಶಾಸಕರು ಕ್ಲೈಂ ಮಾಡುತ್ತಾರೆ. ಹಾಗೂ ದೂರವಾಣಿ ವೆಚ್ಚವನ್ನೂ ಸಹ ಶಾಸಕರು ಕ್ಲೈಂ ಮಾಡಿಕೊಳ್ತಾರೆ. 60 ಸಾವಿರ ರೂ ಕ್ಷೇತ್ರ ಭತ್ಯೆ ಎಂದು ಕ್ಲೈಂ ಆಗುತ್ತದೆ. 2 ಲಕ್ಷ 5 ಸಾವಿರ ರೂ ಪೇಮೆಂಟ್ ಪಡೆದುಕೊತ್ತುದು ಈ ವೇತನ ಭತ್ಯೆಗಳನ್ನು ಯಾವ ಆಧಾರದ ಮೇಲೆ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ ಸಾರ್ವಜನಿಕರ ತೆರಿಗೆ ಹಣದಲ್ಲಿ ಇವರು ವೇತನ ಭತ್ಯೆ ತೆಗೆದುಕೊಳ್ಳುತ್ತಿದ್ದಾರೆ ಇದಕ್ಕೆ ಖಡಿವಾಣ ಹಾಕದಿದ್ದರೆ ಕಾನೂನು ಹೋರಾಟ ಮಾಡುತ್ತೆನೆ ಎಂದ ಭೀಮಪ್ಪ ಗಡಾದ್ ಎಚ್ಚರಿಸಿದರು.

ಶಾಸಕರಿಗೆ ಕಿರುನಿದ್ರೆ ಕುರ್ಚಿಗಳನ್ನು ಕೊಡುವ ಅವಶ್ಯಕತೆ ಇಲ್ಲ.ಊಟ ಕುರ್ಚಿ ‌ಕೊಟ್ಟರೆ ಅದು ವಿಧಾನಸೌಧ ಆಗಲ್ಲ ಕನ್ನಡ ಶಾಲೆಯಾಗುತ್ತೆ ಇಂದು ಊಟ ಕೊಟ್ಟರೆ ಮಾತ್ರ ಬರುವ ಶಾಸಕರು ನಾಳೆ ಅರ್ಧ ತೊಲ ಬಂಗಾರ ಕೊಟ್ಟಾಗ ಮಾತ್ರ ಸದನಕ್ಕೆ ಬರುತ್ತಾರೆ. ಇದನ್ನೂ   ಪ್ರಶ್ನೆ ಮಾಡಿದಾಗ ಸದನಕ್ಕೆ ಗೈರಾಗುವ ಶಾಸಕರಿಗೆ 10 ಸಾವಿರ ದಂಡ ವಿಧಿಸುವ ತೀರ್ಮಾಣ ಮಾಡಬೇಕು. ಇದರ ವಿರುದ್ಧ ಎರಡು ದಿನಗಳಲ್ಲಿ ಪಿ ಐ ಎಲ್ ಹಾಕುವೆ ಎಂದ ಗಡಾದ್ ಹೇಳಿದರು.

Home add -Advt

Related Articles

Back to top button