Latest

ವಿವಾದಕ್ಕೀಡಾದ ಬಿಜೆಪಿ ಶಾಸಕನ ಹೇಳಿಕೆ; ಅನುಭವದ ಕೊರತೆ ಎಂದ ಬಿಜೆಪಿ

ಪ್ರಗತಿ ವಾಹಿನಿ ಸುದ್ದಿ ಲಕ್ನೋ – 

ಉತ್ತರ ಪ್ರದೇಶದ ಬಿಜೆಪಿ ಶಾಸಕ ದಿನೇಶ ರಾವತ್ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೀಡಾಗಿದೆ.

ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಹೈದರ್‌ಘರ್ ಮತಕೇತ್ರದಿಂದ ಆಯ್ಕೆಯಾಗಿರುವ ಶಾಸಕ ದಿನೇಶ್ ರಾವತ್, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಹೋಲಿ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿ, ನನಗೆ ಮತ ಹಾಕದವರಿಗೆ ನಾನು ಯಾವುದೇ ಸಹಾಯ ಮಾಡಲ್ಲ, ಮತ ಹಾಕದವರು ನನ್ನಿಂದ ಯಾವ ಸಹಾಯವನ್ನೂ ನಿರೀಕ್ಷಿಸಬೇಡಿ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಅಲ್ಲದೇ ಸಾರ್ವಜನಿಕರಿಂದ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ.

ದಿನೇಶ್ ರಾವತ್ ಹೈದರ್‌ಘರ್ ಮತ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ೨೫ ಸಾವಿರ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

Home add -Advt

ದಿನೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಬಜೆಪಿ ಮುಖಂಡರು, ಅವರಿಗೆ ಅನುಭವದ ಕೊರತೆಯಿದ್ದು ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ. ಅವರಿಗೆ ತಿಳಿಸಿ ಹೇಳಲಾಗಿದೆ ಎಂದಿದ್ದಾರೆ.

ನವೀನ್ ಗ್ಯಾನಗೌಡರ ಪಾರ್ಥಿವ ಶರೀರ ಆಗಮನ: ಪ್ರಧಾನಿಗೆ ಕರೆಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button