
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಕಾಗವಾಡ ಕ್ಷೇತ್ರದಲ್ಲಿ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದ್ದು, 10 ಅಭ್ಯರ್ಥಿಗಳ ನಾಮ ಪತ್ರ ಸ್ವೀಕರಿಸಲಾಗಿದೆ.
ಕಾಂಗ್ರೆಸ್ ನ ರಾಜು ಕಾಗೆ, ಬಿಜೆಪಿಯ ಶ್ರೀಮಂತ ಪಾಟೀಲ, ಜೆಡಿಎಸ್ ನ ಶ್ರೀಶೈಲ ತುಗಶೆಟ್ಟಿ, ವಂಚಿತ್ ಬಹುಜನ ಆಘಾಡಿಯ ವಿವೇಕ ಜಯೇಂದ್ರ ಶೆಟ್ಟಿ, ಉತ್ತಮ ಪ್ರಜಾಕೀಯ ಪಾರ್ಟಿಯ ಸಚಿನ್ ಅಲಗೂರೆ, ಪಕ್ಷೇತರರಾದ ಅರ್ಚನಾ ಮೋಳೆಕರ್, ಅಮೂಲ್ ಸದಾಶಿವ ಸರ್ದೆ, ದೀಪಕ್ ಜಗನ್ನಾಥ ಬುರ್ಲಿ, ಮುರಗೆಪ್ಪ ನಿಂಗಪ್ಪ ದೇವರಡ್ಡಿ, ಸಂದೀಪ್ ಗೋಪಾಲ ಕಾಂಬ್ಳೆ ನಾಮಪತ್ರಗಳು ಸ್ವೀಕೃತವಾಗಿವೆ.
ಅಥಣಿಗೆ 16, ಗೋಕಾಕ 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ