
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇಲ್ಲಿಯ ವಿದ್ಯಾಗಿರಿಯ ಶ್ರವಣ ದೋಷವುಳ್ಳ ಮಕ್ಕಳ ಸರಕಾರಿ ಶಾಲೆಯಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಅನುಶ್ರೀ ದೇಶಪಾಂಡೆ ಉಚಿತ ಪಠ್ಯಪುಸ್ತಕ ವಿತರಿಸಿದರು.
ಇಲ್ಲಿನ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಒದಗಿಸಿಕೊಡಬೇಕು. ಮಕ್ಕಳು ಸೌಲಭ್ಯಗಳನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪತ್ರಾಂಕಿತ ಅಧಿಕಾರಿ ಆರ್.ಬಿ.ಬನಶಂಕರಿ, ಉದ್ಯಮಿ ದಿನೇಶ ದೇಶಪಾಂಡೆ, ಶಿಕ್ಷಕರಾದ ಎಸ್.ಬಿ.ಪಾಟೀಲ, ರತ್ನಮ್ಮ ಪಿ, ಮುಱಳೀಧರ ಎಂ., ಸಂತೋಷಕುಮಾರ ಎಂ., ಶಿವಜ್ಯೋತಿ, ಹಸೀನಾ ಮುಜಾವರ, ಸವಿತಾ, ರಶ್ಮಿ, ದೀಪಾ, ಸಿಬ್ಬಂದಿಯಾದ ಆರ್.ಬಿ.ಯಮಕನಮರಡಿ, ಮಾರುತಿ ಕೆಂಪಣ್ಣವರ್ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ