GIT add 2024-1
Laxmi Tai add
Beereshwara 33

ಗಮನಿಸಿ: ಬೆಳಗಾವಿಯಲ್ಲಿ ನಾಳೆ ಮಾರ್ಗ ಬದಲಾವಣೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯಪಾಲರ ಹಾಗೂ ಗಣ್ಯವ್ಯಕ್ತಿಗಳ ಬೆಳಗಾವಿ ನಗರ ಪ್ರವಾಸ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಆಯ್ದ ಮಾರ್ಗಗಳ ಸಂಚಾರ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

1) ಸಾಂಬ್ರಾ ವಿಮಾನ ನಿಲ್ದಾಣ ರಸ್ತೆ, ಸಾಂಬ್ರಾ ಅಂಡರ್ ಬ್ರಿಜ್, ಮುಚ್ಚಂಡಿ ಗ್ಯಾರೇಜ್, ರಾಷ್ಟ್ರೀಯ ಹೆದ್ದಾರಿ- 4, ಕನಕದಾಸ ವೃತ್ತ, ಲೇಕ್‌ವಿವ್ ಆಸ್ಪತ್ರೆ, ನಿತ್ಯಾನಂದ ಕ್ರಾಸ್, ಅಶೋಕ ಪಿಲ್ಲರ್, ಹೊಟೇಲ್‌ ತ್ರಿವೇಣಿ, ಸಂಗೋಳ್ಳಿ ರಾಯಣ್ಣ ವೃತ್ತ, ಕೋರ್ಟ್ ಕಂಪೌಂಡ್, ರಾಣಿ ಚನ್ನಮ್ಮ ವೃತ್ತ, ಗಣೇಶ ಮಂದಿರ, ಕ್ಲಬ್‌ ರಸ್ತೆ ವಿಶ್ವೇಶ್ವರಯ್ಯ, ನಗರ ಬಾಚಿ ಕ್ರಾಸ್, ಸಿಪಿಎಡ್ ಮೈದಾನ ಇದು ಗಣ್ಯವ್ಯಕ್ತಿಗಳು ಸಂಚರಿಸುವ ಮಾರ್ಗವಾಗಿದ್ದು, ಸಾರ್ವಜನಿಕರು ಈ ಮಾರ್ಗದಲ್ಲಿ ಸಂಚರಿಸದೆ ಪರ್ಯಾಯ ಮಾರ್ಗವನ್ನು ಬಳಸಿಕೊಳ್ಳುವುದು.

2) ನಿಪ್ಪಾಣಿ, ಕೋಲ್ಲಾಪೂರ, ಅಥಣಿ, ಚಿಕ್ಕೋಡಿ, ಸಂಕೇಶ್ವರ, ಯಮಕನಮರ್ಡಿ, ಕಾಕತಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸಿ ಖಾನಾಪುರ, ಗೋವಾ ಕಡೆಗೆ ಸಂಚರಿಸುವ ವಾಹನಗಳು ಹಿಂಡಾಲ್ಕೋ ಅಂಡರ್ ಬ್ರಿಜ್, ಬಾಕ್ಸಾಯಿಟ್ ರಸ್ತೆ, ಫಾರೆಸ್ಟ್ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್, ಶೌರ್ಯ ಸರ್ಕಲ್‌’ (ಮಿಲ್ಟ್ರಿ ಆಸ್ಪತ್ರೆ), ತಿಮ್ಮಯ್ಯ ರಸ್ತೆ, ಕೇಂದ್ರಿಯ ವಿದ್ಯಾಲಯ ನಂ-2, ಶರ್ಕತ್ ಪಾರ್ಕ, ಇಂಡಿಪೆಂಡೆನ್ಸ್ ರಸ್ತೆ, ಗೌಳಿ ಗಲ್ಲಿ, ಫರ್ನಾಂಡಿಸ್‌ ರಸ್ತೆ, ನೆಲಸನ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರ, ಕಾಂಗ್ರೇಸ್ ರಸ್ತೆ ಸೇರಿ ಮುಂದೆ ಸಂಚರಿಸುವುದು,

3) ಬೆಳಗಾವಿ ನಗರದಿಂದ ನಿಪ್ಪಾಣಿ, ಕೊಲ್ಲಾಪುರ, ಅಥಣಿ, ಕಾಕತಿ ಕಡೆಗೆ ಸಂಚರಿಸುವ ವಾಹನಗಳು ಕೃಷ್ಣದೇವರಾಯ ವೃತ್ತ, ಹೊಟೇಲ್ ರಾಮದೇವ, ಕೆಎಲ್‌ಇ ಆಸ್ಪತ್ರೆ ರಸ್ತೆ, ಕೆಎಲ್‌ಇ ವೃತ್ತ ಮುಖಾಂತರ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿ ಸಂಚರಿಸುವುದು.

4) ಹುಬ್ಬಳ್ಳಿ ಧಾರವಾಡ, ಬೈಲಹೊಂಗಲ, ಸೌದತ್ತಿ, ಹಿರೇಬಾಗೇವಾಡಿ, ಕಡಗಳಿಂದ ಗೋವಾ ಹಾಗೂ ಖಾನಾಪುರ ಕಡೆಗೆ ಸಂಚರಿಸುವವರು ಅಲಾರವಾಡ ಬ್ರಿಜ್, ಹಳೆ ಪಿಬಿ ರಸ್ತೆ, ಪ್ಯಾಟ್ಸನ್ ಶೋ ರೂಂ, ವೈಭವ ಹೊಟೇಲ್, ಡಬಲ್ ರೋಡ್ ಕ್ರಾಸ್, ಬ್ಯಾಂಕ್ ಆಫ್ ಇಂಡಿಯ, ಗೋವಾ ವೇಸ್, ಆ‌ರ್ಪಿಡಿ ಸರ್ಕಲ್, ಪರ್ಸ್ಟ್ ಗೇಟ್, ರೈಲ್ವೆ ಓವರ್ ಬ್ರಿಜ್ ಮೂಲಕ ಮುಂದೆ ಸಂಚರಿಸುವುದು.

5) ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸೌದತ್ತಿ, ಹಿರೇಬಾಗೇವಾಡಿ ಕಡೆಗೆ ಸಂಚರಿಸುವವರು ಹಳೆ ಪಿಬಿ ರಸ್ತೆ,, ಅಲಾರವಾಡ ಅಂಡರ್ ಬ್ರಿಜ್ ಮೂಲಕ ರಾಷ್ಟ್ರೀಯ ಹೆದ್ದಾರಿ 4 ನ್ನು ಸೇರಿ ಮುಂದೆ ಸಾಗುವುದು.

Emergency Service

6) ವೆಂಗುರ್ಲಾ, ಸಾವಂತವಾಡಿ, ಹಿಂಡಲಗಾ, ಸುಳಗಾ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿ 4ರ ಕಡೆಗೆ ಸಂಚರಿಸುವ ವಾಹನಗಳು ಫಾರೆಸ್ಟ್ ನಾಕಾ ಹತ್ತಿರ ನಗರ ಕಡೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು, ಬಾಕ್ಸಾಯಿಟ್ ರಸ್ತೆ, ಹಿಂಡಾಲ್ಕೋ ಅಂಡರ್ ಬ್ರಿಜ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರಿ ಮುಂದೆ ಸಂಚರಿಸುವುದು.

7) ವಿಜಯಪುರ, ಬಾಗಲಕೋಟ, ಯರಗಟ್ಟಿ, ನೇಸರಗಿ ಕಡೆಗಳಿಂದ ಬೆಳಗಾವಿ ನಗರ ಕಡೆಗೆ ಬರುವ ವಾಹನಗಳನ್ನು ಮಾರಿಹಾಳ ಪೊಲೀಸ್ ಠಾಣೆಯ ಹತ್ತಿರ ತಡೆದು ಬಲತಿರುವು ಪಡೆದುಕೊಂಡು ಸುಳೆಭಾವಿ ಗ್ರಾಮದ ಮುಖಾಂತರ, ಖನಗಾಂವ ಕ್ರಾಸ್ ಮೂಲಕ ಕಣಬರಗಿ ರಸ್ತೆ, ಕನಕದಾಸ ಸರ್ಕಲ್, ರಾಷ್ಟ್ರೀಯ ಹೆದ್ದಾರಿ 4 ರ ಮುಖಾಂತರ ನಿಸರ್ಗ ಧಾಬಾ ಹತ್ತಿರ ಎಡತಿರುವು ಪಡೆದುಕೊಂಡು ಕೆಪಿಟಿಸಿಎಲ್‌ ರಸ್ತೆ ಮೂಲಕ ನಗರ ಪ್ರವೇಶಿಸುವುದು.

8) ಬೆಳಗಾವಿ ನಗರದಿಂದ ಸಾಂಬ್ರಾ, ನೇಸರಗಿ, ಯರಗಟ್ಟಿ, ಬಾಗಲಕೋಟ, ವಿಜಯಪುರ ಕಡೆಗೆ ಸಂಚರಿಸುವ ವಾಹನಗಳು ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಿ ಖನಗಾಂವ ಕ್ರಾಸ್, ಸುಳೆಭಾವಿ ಗ್ರಾಮದ ಮೂಲಕ ಬಾಗಲಕೋಟ ರಸ್ತೆಗೆ ಸೇರಿ ಸಂಚರಿಸುವುದು.

9) ಮುಂಜಾನೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಎಲ್ಲ ಭಾರಿ ಗಾತ್ರದ ವಾಹನಗಳು ಎಲ್ಲ ದಿಕ್ಕುಗಳಿಂದ ಬೆಳಗಾವಿ ನಗರ ಪ್ರವೇಶಿಸುವುದನ್ನು ಹಾಗೂ ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.

Bottom Add3
Bottom Ad 2