ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನರೇಂದ್ರ ಮೋದಿ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಜನ ಬಹುಮತದಿಂದ ಆಯ್ಕೆ ಮಾಡಿ ಕಳುಹಿಸಿದ್ದರು. ಆದರೆ ಪ್ರಸ್ತುತ ಕೇಂದ್ರ ಸರಕಾರದ ಬಜೆಟ್ ಜನರ ನಿರೀಕ್ಷೆಗಳನ್ನೆಲ್ಲ ಹುಸಿಯಾಗಿಸಿದೆ ಎಂದು ಶಾಸಕಿ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಜನಸಾಮಾನ್ಯರಿಗೆ ಬಜೆಟ್ ಏನನ್ನೂ ಕೊಟ್ಟಿಲ್ಲ. ಪೆಟ್ರೋಲ್, ಡಿಸೆಲ್, ಆಟೋಮೊಬೈಲ್ ಉಪಕರಣಗಳ ಬೆಲೆಯನ್ನು ಇನ್ನಷ್ಟು ಏರಿಸುವ ಮೂಲಕ ಗಾಯದ ಮೇಲೆ ಮತ್ತೊಂದು ಬರೆ ಎಳೆಯಲಾಗಿದೆ. ಈಗಿನ ಅತ್ಯಂತ ಅಗತ್ಯವಾದ ಉದ್ಯಮ ವಲಯದ ಅಭಿವೃದ್ಧಿಗಾಗಲಿ, ಹೊಸ ಉದ್ಯೋಗ ಸೃಷ್ಟಿಗಾಗಲಿ ಬಜೆಟ್ ಕೊಡುಗೆ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಉಳಿದಿರುವ ಪ್ರಸಕ್ತ ಆರ್ಥಿಕ ವರ್ಷದ 8 ತಿಂಗಳ ಬಜೆಟ್ ಮಂಡಿಸುವ ಬದಲು ಮುಂದಿನ 5 ವರ್ಷದ ಯೋಜನೆ ಎನ್ನುವಂತೆ ಬಿಂಬಿಸಿ ಜನರ ದಾರಿತಪ್ಪಿಸುವ ಕೆಲಸ ಮಾಡಲಾಗಿದೆ. ಮುಂದೆ ಏನು ಮಾಡುತ್ತೇವೆ ಎಂದು ಹೇಳುವ ಬದಲು ಹಿಂದಿನ 5 ವರ್ಷದ ಪೋಸ್ಟ್ ಮಾರ್ಟಮ್ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನರು ಭ್ರಮನಿರಸನಗೊಳ್ಳುವಂತಾಗಿದೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ