370 ನೇ ವಿಧಿಯನ್ನು ಟೀಕಿಸಿ ಪೋಸ್ಟರ್ ಅಂಟಿಸಿದ ವಿದ್ಯಾರ್ಥಿಗಳು, ನೋಟಿಸ್ ಜಾರಿ
ಪ್ರಗತಿವಾಹಿನಿ ಸುದ್ದಿ – ಚೆನ್ನೈ : 370 ನೇ ವಿಧಿಯನ್ನು ರದ್ದುಪಡಿಸುವ ಕುರಿತು ವಿಮರ್ಶಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದ 30 ವಿದ್ಯಾರ್ಥಿಗಳಿಗೆ ತಮಿಳುನಾಡಿನ ಕೇಂದ್ರ ವಿಶ್ವವಿದ್ಯಾಲಯ ನೋಟಿಸ್ ನೀಡಿದೆ. ಮೂವತ್ತರಲ್ಲಿ ಐವರು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಯಾರೂ ಚರ್ಚಿಸ ಬಾರದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದರು. ಆದರೆ, ವಿದ್ಯಾರ್ಥಿಗಳು ಈ ಬಗ್ಗೆ ಸಭೆ ನಡೆಸಿ ಈ ರೀತಿಯ ಪೋಸ್ಟರ್ ಗಳನ್ನ ಅಂಟಿಸಿ ಟೀಕಿಸಿದ್ದಾರೆ. ಆಗಸ್ಟ್ 9 ರಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು 30 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಮುಂಚಿತವಾಗಿ ನೋಟಿಸ್ ನೀಡಿದ್ದರೂ ಸಭೆ ಏಕೆ ನಡೆಯಿತು ಎಂಬುದರ ಕುರಿತು ಬ್ರೀಫಿಂಗ್ ನೀಡಲು ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ತಿಳಿಸಿದೆ. ಎಲ್ಲದಕ್ಕೂ ಮೂರು ದಿನಗಳಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು ಗುಂಪನ್ನು ರಚಿಸಿ ಆಗಸ್ಟ್ 7 ರಂದು, ಕಾಶ್ಮೀರ ಬೆಳವಣಿಗೆಗಳ ಬಗ್ಗೆ ಮತ್ತು 370 ಕುರಿತು ಚರ್ಚಿಸಿ, ನಂತರ 370 ಅನ್ನು ಟೀಕಿಸುವ ಪೋಸ್ಟರ್‌ಗಳನ್ನು ಅಂಟಿಸಿದ್ದರು. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ