ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಂತಲಾ ನಾಟ್ಯಾಲಯ ಇನ್ಸ್ಟಿಟ್ಯೂಟ್ ವತಿಯಿಂದ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಟಿಳಕ ಚೌಕ್ ಬಳಿಯ ಲೋಕಮಾನ್ಯ ರಂಗಮಂದಿರದಲ್ಲಿ ‘ನೃತ್ಯೋಲ್ಲಾಸ’ ಕಾರ್ಯಕ್ರಮ ಇಂದು ಸಂಜೆ 5.30ಕ್ಕೆ ಆಯೋಜನೆಗೊಂಡಿದೆ.
ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಭಾಗವಹಿಸಲಿದ್ದಾರೆ. ನಾಟ್ಯಾಂಜಲಿ ನೃತ್ಯಕಲಾ ಕೇಂದ್ರ (ಹುಬ್ಬಳ್ಳಿ- ಶಿರಸಿ)ದ ನಿರ್ದೇಶಕಿ ಸಹನಾ ಭಟ್ ಹಾಗೂ ಪ್ರಗತಿವಾಹಿನಿ ಮುಖ್ಯ ಸಂಪಾದಕ ಎಂ.ಕೆ. ಹೆಗಡೆ ಅವರು ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸುವರು.
ಕಾರ್ಯಕ್ರಮದ ವಿವರ ಇಂತಿದೆ:
ಗಣೇಶ ಶೃತಿಯೊಂದಿಗೆ ಪುಷ್ಪಾಂಜಲಿ– ವಿದುಷಿ ಅನುಶ್ರೀ ಖಡಬಡಿ ಹಾಗೂ ವಿದ್ವತ್ ತಂಡ,
ಶ್ಲೋಕ– ಸಬ್ ಜ್ಯೂನಿಯರ್ ತಂಡ
ವಚನ– ಮಾ. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡ
ಸಂಪೂರ್ಣ ರಾಮಾಯಣ– ರೋಹಿತ್ ಹಾಗೂ ವಿದ್ವತ್ ತಂಡ
ದೇವರನಾಮ– ಗುರು ವಿದುಷಿ ರೇಖಾ ಅಶೋಕ ಹೆಗಡೆ
ಪದಂ-ಮಾ. ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡ
ಏಕತೆ ಮತ್ತು ವೈವಿಧ್ಯತೆ– ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡ
ವಿದುಷಿ ರೇಖಾ ಹೆಗಡೆ ಅವರು ನೃತ್ಯ ಸಂಯೋಜಿಸಿದ್ದು ವ್ಯಾಖ್ಯಾನದಲ್ಲಿ ಸುಬ್ರಹ್ಮಣ್ಯ ಭಟ್, ಆರ್ಯ ಭಂಡಾರಕರ ಸಾಥ್ ನೀಡಲಿದ್ದಾರೆ. ಪ್ರವೀಣ ಪ್ರಭು, ಬೆಳಗಾವಿ ಬೆಳಕು ಮತ್ತು ಶಬ್ದ ನಿರ್ವಹಿಸುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ