ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಳೆದ ನವೆಂಬರ್ 21ರಂದು (2018) ಆರಂಭವಾಗಿರುವ ನಿಮ್ಮ ಪ್ರಗತಿ ಮೀಡಿಯಾ ಹೌಸ್ ಬಳಗದ ಪ್ರಗತಿವಾಹಿನಿ ( pragativahini.com ) ಓದುಗರ ಸಂಖ್ಯೆ ಕೇವಲ 6 ತಿಂಗಳಲ್ಲಿ ಒಂದು ಲಕ್ಷ ದಾಟಿದೆ ಎಂದು ತಿಳಿಸಲು ಹರ್ಷವೆನಿಸುತ್ತಿದೆ.
ದಿನದಿಂದ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮದ ಸಾಲಿಗೆ ಪ್ರಗತಿವಾಹಿನಿ ಸೇರಿಕೊಂಡಾಗ ಓದುಗರು ಯಾವ ರೀತಿ ಸ್ವಾಗತಿಸುತ್ತಾರೆ ಎನ್ನುವ ಕುತೂಹಲವಿತ್ತು, ಆತಂಕವೂ ಇತ್ತು. ಆದರೆ ಆರಂಭದಿಂದಲೂ ಸಿಕ್ಕ ಪ್ರತಿಕ್ರಿಯೆ, ಪ್ರೋತ್ಸಾಹ ಮಾತ್ರ ಅಮೋಘವಾದದ್ದು.
ಬೆಳಗಾವಿಯಷ್ಟೆ ಅಲ್ಲದೆ, ಕರ್ನಾಟಕದ ವಿವಿಧ ಭಾಗಗಳಲ್ಲಿ, ದೇಶ- ವಿದೇಶಗಳಲ್ಲೂ ನೆಲೆಸಿರುವ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಪ್ರಗತಿವಾಹಿನಿ ಬಳಗ ಸೇರಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಇಂಗ್ಲೀಷ್ ಸುದ್ದಿ ಓದುಗರೂ ಪ್ರಗತಿವಾಹಿನಿಯೊದಿಗ ಬೆಸೆದುಕೊಂಡಿದ್ದಾರೆ.
ಈ ಭಾಗದ ಹಲವಾರು ಸಾಮಾಜಿಕ ಹೋರಾಟಗಳಿಗೆ ಪ್ರಗತಿವಾಹಿನಿ ತನ್ನದೇ ಆದ ಕೊಡುಗೆ ನೀಡಿದೆ. ಓದುಗರ ಜೊತೆ ನಿರಂತರವಾಗಿ ಸ್ಪಂದಿಸುತ್ತ, ಅವರ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯುತ್ತಿದೆ. ನಿತ್ಯ ಬರುತ್ತಿರುವ ಪ್ರತಿಕ್ರಿಯೆಗಳು, ತಮ್ಮ ಸುದ್ದಿ ಪ್ರಕಟಿಸುವಂತೆ ಓದುಗರ ಪ್ರೀತಿಯ ಆಗ್ರಹ, ಒತ್ತಡಗಳು ನಮ್ಮನ್ನು ಇನ್ನಷ್ಟು ಹುರುದುಂಬಿಸುವಂತೆ ಮಾಡಿವೆ.
ವಿಶೇಷವೆಂದರೆ ದಿನದಿಂದ ದಿನಕ್ಕೆ ನಮ್ಮ ನಿರೀಕ್ಷೆಗೂ ಮೀರಿ ಓದುಗರ ಸಂಖ್ಯೆ ಬೆಳೆಯುತ್ತಲೇ ಇದೆ. ತಾವು ಓದುವುದಲ್ಲದೆ ಬೇರೆ ಬೇರೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಗತಿವಾಹಿನಿ ಸುದ್ದಿಗಳನ್ನು ಇತರರಿಗೆ ಹಂಚುವವರ ಸಂಖ್ಯೆಯೂ ಅಪಾರವಾಗಿದೆ.
ಓದುಗರ ಹಾಗೂ ಜಾಹಿರಾತುದಾರರ ಈ ಪ್ರೀತಿಗೆ ಪ್ರಗತಿವಾಹಿನಿ ಋಣಿಯಾಗಿದೆ.
ಪ್ರಗತಿ ಮೀಡಿಯಾ ಹೌಸ್ ಮುಂದಿನ ದಿನಗಳಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದೆ. ಅದೆಲ್ಲಕ್ಕೂ ನಿಮ್ಮ ಪ್ರೀತಿ, ಪ್ರೋತ್ಸಾಹ ಇದೇ ರೀತಿ ಇರಲಿ. ಸದಾ ಸಲಹೆ, ಸೂಚನೆಗಳನ್ನು ನೀಡುತ್ತಿರಿ. ನಿಮಗಿದೋ ಮತ್ತೊಮ್ಮೆ ನಮ್ಮ ನಮನಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ