Latest

ನವೋದಯ ವಿದ್ಯಾಲಯ ಸಮಿತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿ (ಎನ್ ವಿ ಎಸ್) ವಿವಿಧ ಗ್ರೂಪ್ ಗಳ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಫೆಬ್ರವರಿ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಎನ್ ವಿ ಎಸ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಬಹುದು.

ಒಟ್ಟು 1925 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 5 ಗ್ರೂಪ್ ಎ ಸಹಾಯಕ ಆಯುಕ್ತರು, 2 ಸಹಾಯಕ ಆಯುಕ್ತ ನಿರ್ವಾಹಕರು, 2 ಗ್ರೂಪ್ ಬಿ ಮಹಿಳಾ ಸಿಬ್ಬಂದಿ, 10 ಗ್ರೂಪ್ ಸಿ ಸಹಾಯಕ ವಿಭಾಗ ಅಧಿಕಾರಿಗಳು, 11 ಕಿರಿಯ ಭಾಷಾಂತರ ಅಧಿಕಾರಿ, 4 ಜೂನಿಯರ್ ಇಂಜಿನಿಯರ್ (ಸಿವಿಲ್), 22 ಕಂಪ್ಯೂಟರ್ ಆಪರೇಟರ್ಸ್, 4 ಅಡುಗೆಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ navodaya.gov.inಗೆ ಭೇಟಿ ನೀಡಿ.
ಚಂದನವನದ ಹೊಸ ಕೋಲ್ಮಿಂಚು ಸುಶ್ಮಿತಾ ಊರ್ವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button