
ಪ್ರಗತಿವಾಹಿನಿ ಸುದ್ದಿ ನವದೆಹಲಿ –
ಭಾರತೀಯ ವಾಯು ಪಡೆಯ ಬತ್ತಳಿಕೆಯಲ್ಲಿರುವ ಹೆಲಿಕಾಪ್ಟರ್‌ಗಳ ಪೈಕಿ ಚಿನಾಕ್ ಹೆಲಿಕಾಪ್ಟರ್‌ಳು ಅತ್ಯಂತ ಮಹತ್ವದ್ದಾಗಿದೆ. ಮಲ್ಟಿ ರೋಲ್ ವರ್ಟಿಕಲ್ ಲಿಫ್ಟ್ ಪ್ಲಾಟ್‌ಫಾರಂ ಹೊಂದಿರುವ ಚಿನಾಕ್ ಹೆಲಿಕಾಪ್ಟರ್‌ಗಳನ್ನು ಯುದ್ಧದ ಸಂದರ್ಭವಲ್ಲದೆ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೂ ಬಳಸಲಾಗುತ್ತದೆ.
ಇಂಥಹ ಹೆಮ್ಮೆಯ ಚಿನೋಕ್ ಮಾದರಿಯ ಹೆಲಿಕಾಪ್ಟರ್ ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಚಂಡಿಘಡದಿಂದ ಅಸ್ಸಾಮ್‌ನ ಜೋರ್ಹಟ್‌ವರೆಗೆ ೧೯೧೦ ಕಿಮೀ ದೂರವನ್ನು ತಡೆರಹಿತವಾಗಿ ಕ್ರಮಿಸಿದೆ. ಈ ದೂರವನ್ನು ಸುಮಾರು ೭ ಗಂಟೆ ೩೦ ನಿಮಿಷಗಳಲ್ಲಿ ಚಿನೋಕ್ ಹೆಲಿಕಾಪ್ಟರ್ ನಾನ್ ಸ್ಟಾಪ್ ಸಂಚಾರ ಮಾಡಿದೆ.
ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ